ಬಾಗಲಕೋಟೆ: ರಾಷ್ಟ್ರವಿರೋಧಿ ಶಕ್ತಿಗಳನ್ನ ಯಾವ ಕಾರಣಕ್ಕೂ ಕೂಡ ನಾವು ಸಾಕಬಾರದು ಮತ್ತು ಬೆಳೆಸಬರಾದು ಅದು ದೇಶಕ್ಕೆ ಮಾಡುವ ಮಹಾ ದ್ರೋಹ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಜಗದೀಶ ಕಾರಂತ್ ಎಚ್ಚರಿಸಿದರು.
ಹಳೆ ಬಾಗಲಕೋಟೆ ನಗರ,ನವನಗರ,ವಿದ್ಯಾಗಿರಿ ಸೇರಿ ಒಟ್ಟು ಏಳು ಕಡೆ ಕಾಮಧೇನು ತರಕಾರಿ ಮತ್ತು ಹಣ್ಣು ಮಾರಾಟ ಕೇಂದ್ರದ ಅಡಿಯಲ್ಲಿ ಶುಕ್ರವಾರ ಉದ್ಘಾಟನೆಗೊಂಡ ಮಾರಾಟ ಕೇಂದ್ರಗಳ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಭಾರತ ದೇಶ ಮತ್ತು ಜಗತ್ತು ಮಹಾ ಹೆಮ್ಮಾರಿ ಕೊರೋನಾ ವಿರುದ್ಧ ಎದುರಿಸಿದ ಸಂದರ್ಭದಲ್ಲಿ ಒಂದಷ್ಟು ಸತ್ಯದರ್ಶನಗಳು ಭಾರತದಲ್ಲಿ ಆಯಿತು.ಈ ವಿಷಮ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ದೇಶದ ವಿರುದ್ಧ ಸಮಾಜದ ವಿರುದ್ಧ ಮತ್ತು ರಾಷ್ಟ್ರದ ವಿರುದ್ಧವೇ ಬಂಡೇಳುವಂತಹ ಅನೇಕ ಮಾನಸಿಕತೆಗಳು ಪ್ರದರ್ಶನವಾದವು ಎಂದರು.
ಬೆಂಗಳೂರ,ಮಂಗಳೂರ ಸೇರಿದಂತೆ ವಿವಿಧ ಕಡೆ ಪೊಲೀಸರು, ವೈದ್ಯಕೀಯ ಸಿಬ್ಬಂದಿ,ಆಶಾ ಕಾರ್ಯಕತರ್ೆಯರ ಮೇಲೆ ದಾಳಿ ನಡೆದಿರುವುದು ಇವೆಲ್ಲದರ ಹಿಂದೆ ರಾಷ್ಟ್ರವಿರೋಧಿ ಮತೀಯ ಮೂಲಭೂತವಾದಿ ಶಕ್ತಿಗಳ ಹುಚ್ಚಾಟವಿತ್ತು ಎನ್ನುವುದು ಆ ದಿನಗಳಲ್ಲಿ ಮಾಧ್ಯಮಗಳ ಮೂಲಕ ಅರ್ಥವಾಗಿದೆ.ಆ ಹಿನ್ನಲೆಯಲ್ಲಿ ನಮ್ಮ ಸ್ವಾರ್ಥಕ್ಕಾಗಿ ಸಮಾಜ ವಿರೋಧಿಗಳನ್ನು,ದೇಶವಿರೋಧಿಗಳನ್ನು ಅಪ್ಪಿತಪ್ಪಿಯೂ ಕೂಡ ಸಾಕಿ ಬೆಳೆಸುವಂತಹ ಮಹಾಪಾಪವನ್ನು ನಾವು ಯಾರೂ ಮಾಡಬಾರದು ಎಂದರು.
ನಮ್ಮ ಆರ್ಥಿಕ ಬೆಂಬಲದಿಂದ ಬೆಳೆದು ನಿಂತಂತಹ ದುಷ್ಟಶಕ್ತಿಗಳು ದೇಶ ವಿರುದ್ಧವೇ ದಂಗೆಳುವಂತಹ,ಸಮಾಜಕ್ಕೆ ದ್ರೋಹ ಮಾಡುವಂತಹ ಕೃತ್ಯಗಳನ್ನು ಆ ದಿನಗಳಲ್ಲಿ ಎಸಗಿದರು, ಅಂತಹ ಶಕ್ತಿಗಳಿಗೆ ಪಾಠವನ್ನು ಕಲಿಸುವ ದಾರಿ ಎಂದರೆ ಆರ್ಥಿಕ ಸ್ವಾವಲಂಬನೆ,ಇಲ್ಲಿ ನಮ್ಮವರನ್ನು ಬೆಳೆಸುವ,ಪ್ರೋತ್ಸಾಹಿಸುವ ಮೂಲಕ ದೇಶ ವಿರೋಧಿ ಶಕ್ತಿಗಳನ್ನು ಬೆಳೆಸುವಂತಹ ಕೆಲಸವನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ತರಕಾರಿ,ಹಣ್ಣು ಮತ್ತು ಹೂವಿನ ವ್ಯಾಪಾರದಲ್ಲಿ ರೈತರನ್ನು ಶೋಷಣೆ ಮಾಡುವಂತಹ ಒಂದು ಮತೀಯ ಶಕ್ತಿ ಅಂದರೆ ದೊಡ್ಡ ಗ್ಯಾಂಗ ಕಾರ್ಯನಿರ್ವಹಿಸುತ್ತಿತ್ತು.ಇತ್ತೀಚಿನ ಘಟನೆಯಿಂದ ಪಾಠವನ್ನು ಕಲಿತಿರುವ ನಾವೆಲ್ಲಾ ನಮ್ಮ ರೈತ ಬಾಂಧವನಿಗೆ ಏನು ಶೋಷಣೆಯಾಗುತ್ತಿತ್ತು ಅದನ್ನು ತಡೆಯಬೇಕಾಗಿದೆ.ಪಟ್ಟಭದ್ರ ಮತೀಯ ಶಕ್ತಿ ವ್ಯಾಪಾರದಲ್ಲಿ ಹಿಡಿತವನ್ನು ಸಾಧಿಸಿ,ರೈತರ ಶೋಷಣೆ,ಗ್ರಾಹಕರ ಸುಲಿಗೆ ಮಾಡುತ್ತಿತ್ತು ಅದನ್ನು ತಡೆಯುವುದಕ್ಕಾಗಿ ಒಂದು ಸಾಮಾಜಿಕ ಸದುದ್ದೇಶದಿಂದ ಕಾಮಧೇನು ಹಣ್ಣು ಮತ್ತು ತರಕಾರಿ ಮಾರಾಟ ಕೇಂದ್ರದವರು ಮಳಿಗೆಗಳನ್ನು ಆರಂಭಿಸುವ ಮೂಲಕ ವ್ಯಾಪಾರ ಆರಂಭಿಸಿದ್ದಾರೆ.ಪ್ರತಿಯೊಂದು ಮನೆಯವರು ಇದನ್ನು ಬೆಂಬಲಿಸಬೇಕು ಎಂದರು.
ವ್ಯಾಪಾರಕ್ಕಾಗಿ ವ್ಯಾಪಾರ ಅಲ್ಲ ಎನ್ನುವುದನ್ನು ಸುತ್ತಮುತ್ತಲಿನ ಜನ ಅರ್ಥಮಾಡಿಕೊಂಡರೆ ಒಂದು ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರೀಯ ಹೊಣೆಗಾರಿಕೆಯನ್ನು ಈ ಮಳಿಗೆಗಳಲ್ಲಿ ವ್ಯಾಪಾರ ಮಾಡುವ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನವನ್ನು ಸಾರ್ವಜನಿಕರ ಮಾಡಿಕೊಳ್ಳಬೇಕಾಗಿದೆ ಎಂದರು.
ಕಾಮಧೇನು ತರಕಾರಿ ಮತ್ತು ಹಣ್ಣು ಮಾರಾಟ ಕೇಂದ್ರದಿಂದ ಏಕಕಾಲದಲ್ಲಿ ಏಳು ಕಡೆ ಮಳಿಗೆಗೆಳು ಶುಭಾರಂಭಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.
ಗ್ರಾಹಕರಿಗೆ ಗುಣಮಟ್ಟದ ತರಕಾರಿ-ಹಣ್ಣು ಒದಗಿಸುವುದರೊಂದಿಗೆ ರೈತರಿಗೆ ನ್ಯಾಯಯುತ ಬೆಲೆ ಒದಗಿಸುವುದು ಕಾಮಧೇನು ಸಂಸ್ಥೆಯ ಗುರಿಯಾಗಿದೆ ಎಂದು ಸಂಸ್ಥೆಯ ನಿರ್ದೇಶಕ,ವಿಶ್ವಹಿಂದೂ ಪರಿಷತ್ನ ಅಶೋಕ ಮುತ್ತಿನಮಠ ತಿಳಿಸಿದರು.
ಕೃಷ್ಣಮೂರ್ತಿ,ಅಶೋಕ ಮುತ್ತಿನಮಠ ,ಬಸವರಾಜ ಕಟಗೇರಿ,ವಿಜಯ ಸುಲಾಖೆ,ಕಿರಣ ಪವಾಡಶಟ್ಟರ,ರವಿ ಕುಮಟಗಿ,ಶಿವು ಮೆಲ್ನಾಡ,ಸಂತೋಷ ಹೊಕ್ರಾಣಿ,ರಾಜು ರೇವನಕರ,ಕೇಶವ ಬಜಂತ್ರಿ,ಅರುಣ ಲೊಕಾಪೂರ ಸೇರಿದಂತೆ ಮತ್ತಿತರರು ಇದ್ದರು.