Thursday, August 18, 2022

Latest Posts

ಬಾಗಲಕೋಟೆ| ಬಾಲಕ ಸೇರಿ 6 ಜನ ಕೋವಿಡ್ ನಿಂದ ಗುಣಮುಖ

ಬಾಗಲಕೋಟೆ: ಢಾಣಕಶಿರೂರ ಗ್ರಾಮದ ಓರ್ವ ಬಾಲಕ ಸೇರಿ 6 ಜನ ಕೋವಿಡ್ ನಿಂದ ಗುಣಮುಖವಾಗಿ ಜಿಲ್ಲಾ ಆಸ್ಪತ್ರೆಯಿಂದ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು.

ಗುಣ ಮುಖರಾದವರ ಸಂಖ್ಯೆ 37 ಕ್ಕೆ ಏರಿಕೆಯಾಗಿದೆ. ಓರ್ವ ಬಾಲಕ, 4 ಜನ ಮಹಿಳೆಯರು, ಓರ್ವ ಪುರುಷ ಸೇರಿ 6 ಜನ ಗುಣಮುಖರಾಗಿದ್ದಾರೆ.

ಢಾಣಕಶಿರೂರ ಗ್ರಾಮದ 18 ವರ್ಷದ ಮಹಿಳೆ ಪಿ.680, 45 ವರ್ಷದ ಪುರುಷ ಪಿ.681, 55 ವರ್ಷದ ಮಹಿಳೆ ಪಿ.682, 30 ವರ್ಷದ ಮಹಿಳೆ ಪಿ.685, 40 ವರ್ಷದ ಮಹಿಳೆ ಪಿ.687, 10 ವರ್ಷದ ಬಾಲಕ ಪಿ.689 ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಚಪ್ಪಾಳೆ ತಟ್ಟಿ ಜಿಲ್ಲಾ ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!