ಬಾಗಲಕೋಟೆ: ಬಿಜೆಪಿ ಯುವ ಮೋರ್ಚಾ ದಿಂದ ಉಚಿತ ಔಷಧ ವಿತರಣೆ 

0
86

ಬಾಗಲಕೋಟೆ: ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ದೇಶದಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದು ಈ ಸಂದರ್ಭದಲ್ಲಿ ಬಡವರು,ಹಿರಿಯರು ಹಾಗೂ ಮಕ್ಕಳಿಗೆ ಸಣ್ಣಪುಟ್ಟ ಕಾಯಿಲೆಯಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಾರದು ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಉಚಿತವಾಗಿ ಔಷಧಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.

ನಗರದಲ್ಲಿ ಕೊರೋನಾ ಸೋಂಕಿತರ ದೃಢವಾಗಿದ್ದು ಈ ಸಂದರ್ಭದಲ್ಲಿ ನಗರದ ಜನರಿಗೆ ಆತ್ಮಸ್ಥರ್ಯ ತುಂಬವ ಕೆಲಸ ಮಾಡುವ ಜತೆಗೆ ಇರಲು ಬಿಜೆಪಿ ಸಿದ್ದವಾಗಿದ್ದು ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಂದ ಬಳಲು ಜನರಿಗೆ ಮನೆ ಬಾಗಿಲಿಗೆ ಔಷಧವನ್ನು ಬಿಜೆಪಿ ಕಾರ್ಯಕರ್ತರು ತಲುಪಿಸಲಿದ್ದಾರೆ.ಯಾರಿಗಾದರೂ ಔಷಧ ಅವಶ್ಯಕತೆ ಇದ್ದರೆ ಅಕ್ಷಯ ಬರಗಿ (ಮೊ:7899922208), ಬಸವರಾಜ ಯಂಕಂಚಿ (ಮೊ:8152809195) ಗೆಂಪರ್ಕಿ ಸಬಹುದು.

ಬಿಜೆಪಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಯಂಕಂಚಿ ಹಾಗೂ ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ವರ್ಧಮಾನ ಕೋರಿ ಇವರ ನೇತೃತ್ವದಲ್ಲಿ ಬಾಗಲಕೋಟ ನಗರದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಹಾಗೂ ನಗರ ಅಧ್ಯಕ್ಷರು ಬಸವರಾಜ ಅವರಾಧಿ ಹಾಗೂ ಅಕ್ಷಯ ಬರಗಿ ಹಾಗೂ ಯು ಮೋರ್ಚಾ ಕಾರ್ಯಕರ್ತರು ಜನರಿಗೆ ಉಚಿತ ಔಷಧವನ್ನು ವಿತರಣೆ ಮಾಡಿದರು.ಸಾರ್ವಜನಿಕರೆ ಅವಶ್ಯಕತೆ ಇದ್ದರೆ ಮಾತ್ರ ಹೊರಗೆ ಬನ್ನಿ ಇಲ್ಲವಾದರೆ ಮನೆಯಲ್ಲಿ ಇದ್ದು ಕೊರೋನಾ ಸಂಹಾರ ಮಾಡಲು ಸಹಕರಿಸಿ ಎಂದು ಜಾಗೃತಿ ಮೂಡಿಸಿದರು.

LEAVE A REPLY

Please enter your comment!
Please enter your name here