ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲ ಗ್ರಾಮದಲ್ಲಿ ನಡೆದಿದೆ.
ಗುರುವಾರ ಸಂಜೆ ಬಾದಾಮಿ ತಾಲ್ಲೂಕಿನ ಬಾಚಿನಗುಡ್ಡ ಗ್ರಾಮದ ಪ್ರವೀಣ ರೋಣದ( 12), ಬಸವರಾನಜ ಮಹಾಂತಯಹ್ಯ ಹಿರೇಮಠ(12) ಇಬ್ಬರು ಸೇರಿಕೊಂಡು ಪಟ್ಟದಕಲ್ಲು ಸಮೀಪ ಹಾಯ್ದು ಹೋಗಿರುವ ಮಲಪ್ರಭಾ ನದಿಯಲ್ಲಿ ಈಜಲು ತೆರಳಿದ್ದಾರೆ. ಆದರೆ ಆಳವಾದ ನೀರಿನಲ್ಲಿ ಇಬ್ಬರು ಹೋಗಿದ್ದರಿಂದ ಮರಳಿ ದಡ ಸೇರಲು ಸಾಧ್ಯವಾಗದೇ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದಿದ್ದಾಗ ನದಿಯಲ್ಲಿ ಹುಡಕಾಟ ಆರಂಭಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಬಾಲಕರ ಶವವನ್ನು ಹೊರತೆಗೆದಿದ್ದಾರೆ. ಬಾಲಕರ ಶವ ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತು