Tuesday, July 5, 2022

Latest Posts

ಬಾಗಲಕೋಟೆ| ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋದ ರೈತ

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಮಲಪ್ರಭಾ ನದಿಯ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಘಟನೆ ನಡೆದಿದೆ.
ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ರೈತ ನದಿಯಲ್ಲಿ ನಾಪತ್ತೆಯಾಗಿದ್ದು, ಕೊಣ್ಣೂರ 40 ವರ್ಷದ ಬಾಪುಗೌಡ ಸಾಲಿಗೌಡ್ರ ಕೊಚ್ಚಿ ಹೋದ ರೈತನಾಗಿದ್ದಾನೆ.
ಕಾಯಿ ಮಾರಾಟ ಮಾಡಿಕೊಂಡು ಮನೆಗೆ ತೆರಳುವ ಸಂದರ್ಭದಲ್ಲಿ ಗೋವನಕೊಪ್ಪ -ಕೊಣ್ಣೂರ ಕಿರು ಸೇತುವೆಯಲ್ಲಿ ಹೊರಟಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ತಹಶೀಲ್ದಾರ ಸುಹಾಸ್ ಇಂಗಳೆ, ಅಗ್ನಿಶಾಮಕ ಸಿಬ್ಬಂದಿ, ರೈತನ ಹುಡುಕಾಟಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss