ಬಾಗಲಕೋಟೆ: ಅಯೋದ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಭೂಮಿ ಪೂಜಾ ಸಮಾರಂಭದ ದೃಶ್ಯಗಳನ್ನು ಮಳೆಯನ್ನು ಲೆಕ್ಕಿಸದೇ ಬಾಗಲಕೋಟೆ ಜನ ನೇರ ಪ್ರಸಾರ ವೀಕ್ಷಿಸಿದರು.
ಬಾಗಲಕೋಟೆ ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ನೇತೃತ್ವದಲ್ಲಿ ಶ್ರೀ ರಾಮ ಮಂದಿರ ಭೂಮಿ ಪೂಜಾ ಕಾರ್ಯಕ್ರಮವನ್ನು ನೇರ ಪ್ರಸಾರ ಮೂಲಕ ವೀಕ್ಷಿಸಲು ದೊಡ್ಡ ಎಲ್ ಸಿಡಿ ವ್ಯವಸ್ಥೆ ಮಾಡಲಾಗಿತ್ತು.
ತುಂತುರ ಮಳೆಯಲ್ಲಿಯೇ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮ ವೀಕ್ಷಿಸಿದರು.
ಪ್ರಧಾನಿ ನರೇಂದ್ರ ಮೋದಿಯ ರು ಪೂಜಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿ ಶಿರಸಾಸ್ಟಂಗ ಹಾಕಿ ನಮಸ್ಕರಿಸುವ ದೃಶ್ಯ ನೋಡುತ್ತಿದ್ದ ನೆರೆದ ಜನ ಎರಡೂ ಕೈಗಳನ್ನು ಮೇಲಕ್ಕೆತ್ತಿ ಶ್ರೀರಾಮನಿಗೆ ಜೈಕಾರದ ಘೋಷಣೆ ಮಾರ್ದನಿಸಿತು.
ಅಶೋಕ ಸಿಂಘಾಲ, ಪೇಜಾವರ ಶ್ರೀಗಳು, ಭಾರತ ಮಾತಾ ಹಾಗೂ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಮಾಜಿ ಶಾಸಕ ಪಿ.ಎಚ್.ಪೂಜಾರ, ನಾರಾಯಣಸಾ ಭಾಂಡಗೆ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಸಂಗಣ್ಣ ಕುಪ್ಪಸ್ತ, ಶಿವು ಮೇಲ್ನಾಡ ,ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಬಸವರಾಜ ಯಂಕಂಚಿ, ಕಾಂಬಳೆ ಸೇರಿದಂತೆ ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು.