Monday, July 4, 2022

Latest Posts

ಮೂರು ಪುಟಾಣಿಗಳಿಗೆ ಅಂಟಿಕೊಂಡ ಕೊರೋನಾ: 191ಕ್ಕೇರಿದ ಸೋಂಕಿತರ ಸಂಖ್ಯೆ

ಬಾಗಲಕೋಟೆ: ದೇಶದಲ್ಲಿ ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿರುವ ಕೋರೋನಾ ಸೋಂಕು ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮತ್ತೆ ಮೂವರ ಮಕ್ಕಳಿಗೆ ಅಂಟಿಕೊಂಡಿದ್ದು ಇದರಿಂದ ಜಿಲ್ಲೆಯಲ್ಲೇ ಸಧ್ಯ ಸೋಂಕಿತರ ಸಂಖ್ಯೆ ಎಂಟಕ್ಕೇರಿದಂತಾಗಿದೆ.

ಕಳೆದ ಒಂದು ವಾರದಲ್ಲಿ ಐದು ಜನರಿಗೆ ಸೋಂಕು ಹರಡಿದ್ದು ಇದರಲ್ಲಿ ಓರ್ವ ವೃದ್ದ ಸಾವನ್ನಪ್ಪಿದ್ದು ಇವರ ಮನೆಯಲ್ಲಿ ಇಬ್ಬರು ಸಂಬಂಧಿಕರ ಸೋಂಕು ತಗುಲಿತ್ತು ನಂತರ 125 (ಸಾವನ್ನಪ್ಪಿದ) ವ್ಯಕ್ತಿ ನೆರೆಯ ಮನೆಯ 165 ಸೋಂಕು ಪೀಡಿತ ಮಹಿಳೆಗೆ ಸೋಂಕು ತಗುಲಿ ಐಸೋಲೇಶನ್ ವಾರ್ಡ್ ದಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ, 165 ಸೋಂಕಿತ‌ ಮಹಿಳೆಯ ಮನೆಯಲ್ಲಿ 4 ವರ್ಷ ಮಗು ಮತ್ತು 9 ವರ್ಷ ಹಾಗೂ 13 ವರ್ಷದ 165 ಸೋಂಕಿತ ಮಹಿಳೆಯ ಮೈದುನ ಮಕ್ಕಳಿಗೆ ಸೋಂಕು ದೃಢಪಟ್ಟಿದೆ.

ಇದರಲ್ಲಿ 165 ಸೋಂಕಿತ‌ ಮಹಿಳೆಯ ಮಗು ಸೇರಿ ಇಬ್ಬರು ಮೈದುನನ ಮಕ್ಕಳಿಗೆ ಸೊಂಕು ತಗುಲಿದೆ. ಕರೊನಾದಿಂದ ಮೃತಪಟ್ಟ ವೃದ್ಧನ ಪಕ್ಕದ ಮನೆಯ ಕುಟುಂಬಕ್ಕೆ ಕರೊನಾ ಸೋಂಕು ತಗುಲಿದ್ದು ಈಗ ಆ ವಾರ್ಡ್ ನಲ್ಲಿನ ಜನರು ಮತ್ತಷ್ಟು ಆತಂಕದಲ್ಲಿ ಇದ್ದಾರೆ. ಈಗ ಬಾಗಲಕೋಟೆಯಲ್ಲಿ ಮೂವರು ಮಕ್ಕಳಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಜಿಲ್ಲಾಡಳಿತ‌ ಮತ್ತಷ್ಟು ಕಟ್ಟೆಚ್ಚರ‌ವಹಿಸಿದೆ.
ರಾಜ್ಯದಲ್ಲಿ ಈಗಾಗಲೇ 6 ಮಂದಿ ಸಾವನ್ನಪ್ಪಿದ್ದಾರೆ, ಸೋಂಕಿತರ ಸಂಖ್ಯೆ 191ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss