Wednesday, June 29, 2022

Latest Posts

ಬಾಗಲಕೋಟೆ| ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಹೊಸ ದಿಗಂತ ವರದಿ ಬಾಗಲಕೋಟೆ:

ಮುಜರಾಯಿ ಖಾತೆ‌ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ತಾಲ್ಲೂಕಿನ ಆರಾಧ್ಯ ದೈವ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ‌ ಭೇಟಿ ನೀಡಿ‌ದೇವರ ದರ್ಶನ ಪಡೆದುಕೊಂಡರು.

ವೀರಭದ್ರೇಶ್ವರ ದೇವರ ದರ್ಶನ ಪಡೆದುಕೊಂಡ ಬಳಿಕ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ದೇವಸ್ಥಾನದ ಸಮೀಪ 1886 ರಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ ಮುಚಖಂಡಿ ಕೆರೆಗೆ ಭೇಟಿ ನೀಡಿದರು.‌ಇಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸದ ಕುರಿತು ಶಾಸಕ‌‌ ವೀರಣ್ಣ ಚರಂತಿಮಠ ಅವರು ವಿವರ ನೀಡಿದರು.ಮುಚಖಂಡಿ ಗ್ರಾಮದ‌ ವೀರಭದ್ರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರಭುಸ್ವಾಮಿ ಸರಗಣಾಚಾರಿ, ಎಪಿಎಂಸಿ ಅಧ್ಯಕ್ಷ ಕೃಷ್ಣಾ ಲಮಾಣಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss