ಬಾಗಲಕೋಟೆ: ಹದಿನಾರಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ

0
100

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರಿಂದ ಸೊಂಕಿತರ ಸಂಖ್ಯೆ ಹದಿನಾರಕ್ಕೇರಿದಂತಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಕ್ಯಾ.ರಾಜೇಂದ್ರ ತಿಳಿಸಿದ್ದಾರೆ.
65 ವರ್ಷದ ಪಿ.367 ಸೋಂಕಿತ ವ್ಯಕ್ತಿ ಪಿ.186ರ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದಾರೆ.48 ವರ್ಷದ ಪಿ.368 ಸೋಂಕಿತ‌ ವ್ಯಕ್ತಿ ಪಿ.186ರ ವ್ಯಕ್ತಿಯ ದ್ವಿತೀಯ ಸಂಪರ್ಕ ಹೊಂದಿದ್ದರು. ಕಳೆದ 2 ದಿನಗಳಲ್ಲಿ ಕಳುಹಿಸಲಾದ ಒಟ್ಟು 320 ಸ್ಯಾಂಪಲ್ ಗಳ ಪೈಕಿ 220 ನೆಗಟಿವ್, 2 ಪಾಜಿಟಿವ್ ಪ್ರಕರಣ ವರದಿಯಾಗಿವೆ. ಇನ್ನು 195 ಸ್ಯಾಂಪಲ್ ಗಳ ವರದಿ ಬರಬೇಕಾಗಿದೆ..

ಸೋಂಕಿತ ವ್ಯಕ್ತಿಗಳನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.ಈಗಾಗಲೇ ಸೋಂಕಿತರ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.ಜನಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here