ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಗಲಕೋಟೆ ಹಿಂದಿನ ಸಿಇಓ ಮಾನಕರ ರಿಂದ ಕೋಟಿಗೂ ಹೆಚ್ಚು ಅವ್ಯವಹಾರ

ಬಾಗಲಕೋಟೆ: ಹಿಂದಿನ ಜಿಲ್ಲಾ ಪಂಚಾಯತ ಸಿಇಓ ಗಂಗೂಬಾಯಿ ಮಾನಕರ ಅವರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯರು ಒಕ್ಕೋರಲಿನಿಂದ ಆರೋಪಿಸಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಈ ಗಂಭೀರ ಆರೋಪ ಕೇಳಿಬಂದಿತು.
ಹಿಂದಿನ ಸಿಇಓ ಗಂಗೂಬಾಯಿ ಮಾನಕರ ಅವರಿಂದ ಸ್ವಚ್ಛಭಾರತ ಮಿಷನ್ ಯೋಜನೆ ಯಡಿ ಕೋಟಿಗೂ ಹೆಚ್ಚು ಭ್ರಷ್ಟಾಚಾರ ಮಾಡಿದ್ದಾರೆ ಈ ಬಗ್ಗೆ ಸರ್ಕಾರಕ್ಕೆ ತನಿಖೆಗೆ ಪತ್ರ ಬರೆಯಬೇಕು ಎಂದು ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದರು.
ಸ್ವಚ್ಚ ಭಾರತ ಯೋಜನೆಯಡಿ ಗ್ರಾಮ ಪಂಚಾಯತಿ ಮೂಲಕ ಗೋಡೆ ಬರಹ ಹಾಗೂ ಬ್ಯಾನರ್ ಹೀಗೆ ಪ್ರಚಾರದ ಜಾಗೃತಿ ಫಲಕಗಳನ್ನು ಅಳವಡಿಸಲು ಮತ್ತು ಬರೆಸಲು ಧಾರವಾಡದ ಎಸ್ ಬಿ ಎಫ್ ಕನ್ಸ್ ಟ್ರಕ್ಷನ್ ಏಜೆನ್ಸಿಗೆ ಒಂದೇ ಯಾಕೆ ಟೆಂಡರ ಕೊಟ್ಟರೂ ಅಧ್ಯಕ್ಷರು,ಸದಸ್ಯರ ಗಮನಕ್ಕೆ ತರದೇ ಹಿಂದಿನ ಸಿಇಓ ಮಾನಕರ ಕೋಟಿಗೂ ಹೆಚ್ಚು ಕಾಲ ಅವ್ಯವಹಾರ ಮಾಡಿದ್ದಾರೆ ಈ ಬಗ್ಗೆ ಕಾಲ‌ಮಿತಿಯೊಳಗೆ ತನಿಖೆಯಾಗಿ ಅವರ ಮೇಲೆ ಕ್ರಮ ಆಗಬೇಕು ಎಂದು ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಓ. ಟಿ ಭೂಬಾಲನ್ ಒಬ್ಬ ಅಧಿಕಾರಿಯ ಮೇಲೆ ಭ್ರಷ್ಟಾಚಾರ ಗಂಭೀರ ಆರೋಪ ಬಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಥವಾ ಒಂದು‌‌ ಕಮೀಟಿಯನ್ನು ರಚಿಸಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲು ಅವಕಾಶವಿದೆ ಎಂದು ಹೇಳಿದರು.
ಹಿಂದಿನ ಸಿಇಓ ಮಾನಕರ ತಮಗೆ ಬಂದ ರೀತಿ ಕೆಲಸ ಮಾಡಿದ್ದಾರೆ ಸದಸ್ಯರಿಗೆ ಗೌರವ ಕೂಡ ಕೊಡಲಿಲ್ಲ, ಇನ್ನೂ ಸರ್ಕಾರದ ದುಡ್ಡನ್ನು ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಸದಸ್ಯರು ದೂರಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss