Wednesday, August 17, 2022

Latest Posts

ಬಾಗಲಕೋಟೆ| 43 ವರದಿ ನೆಗಟಿವ್, 4 ಮಂದಿ ಕೊರೋನಾದಿಂದ ಗುಣಮುಖ: ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ

ಬಾಗಲಕೋಟೆ: ಜಿಲ್ಲೆಯ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 4 ಜನ ಕೋವಿಡ್ನಿಂದ ಗುಣಮುಖರಾಗಿದ್ದು, ಮೇ 18 ರಂದು ಮಧ್ಯಾಹ್ನ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾಗಲಕೋಟೆಯ 29 ವರ್ಷದ ಮಹಿಳೆ ಪಿ-655, 29 ವರ್ಷದ ಪುರುಷ ಪಿ-656, ಜಮಖಂಡಿಯ 45 ವರ್ಷದ ಮಹಿಳೆ ಪಿ-597, 28 ವರ್ಷದ ಪುರುಷ ಪಿ-455 ಕೋವಿಡ್ನಿಂದ ಗುಣಮುಖರಾದವರು. ಗುಣಮುಖರಾದವರಿಗೆ ಜಿಲ್ಲಾ ಆಸ್ಪತ್ರೆಯಿಂದ ಪ್ರಮಾಣ ಪತ್ರ ನೀಡಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡಲಾಯಿತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 31 ಜನ ಕೋವಿಡ್ನಿಂದ ಗುಣಮುಖರಾಗಿದ್ದು, 39 ಜನ ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ್ದಾರೆ.
ಬಾಗಲಕೋಟೆಯ 29 ವರ್ಷದ ಓರ್ವ ಮಹಿಳೆ ಮತ್ತು ಪುರುಷರಿಬ್ಬರು ಒಂದೇ ಕುಟುಂಬದವರಾಗಿದ್ದು, ಈ ಮೊದಲು ಇದೇ ಕುಟುಂಬದ ಪಿ-367 ಮತ್ತು ಪಿ-368 ಇವರಿಗೆ ಕೋವಿಡ್ ದೃಡಪಟ್ಟಿತ್ತು. ಆದರೆ ಈ ಇಬ್ಬರ ವರದಿಯಲ್ಲಿ ಮಾತ್ರ ನೆಗಟಿವ್ ವರದಿಯಾದ ಹಿನ್ನಲೆಯಲ್ಲಿ 14 ದಿನಗಳ ಪ್ರತ್ಯೇಕ ಕ್ವಾರಂಟೈನ್ನಲ್ಲಿಸ ಇರಿಸಿ ನಿಗಾ ವಹಿಸಲಾಗಿತ್ತು. 14 ದಿನ ಪೂರ್ಣಗೊಂಡ ನಂತರ ಕಳುಹಿಸಿದ ಸ್ಯಾಂಪಲ್ ವರದಿಯಲ್ಲಿ ಮೇ 5 ರಂದು ಪಾಜಿಟಿವ್ ಇರುವುದು ದೃಡಪಟ್ಟಿತ್ತು.
ಅದೇ ರೀತಿ ಪಿ-597, ಜಮಖಂಡಿಯ 45 ವರ್ಷದ ಮಹಿಳೆಗೆ ಪಿ-381 ಸೋಂಕಿತರಿಂದ ಮೇ 2 ರಂದು ದೃಡಪಟ್ಟರೆ, ಪಿ-455, ಮುಧೋಳನ 28 ವರ್ಷ ವ್ಯಕ್ತಿಗೆ ಪಿ-380 ಸಂಪರ್ಕದಿಂದ ಏಪ್ರೀಲ್ 24 ರಂದು ಕೋವಿಡ್ ಸೋಂಕು ದೃಡಪಟ್ಟಿದ್ದರಿಂದ ಸದರಿಯವರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿರುವುದರಿಂದ ಅವರನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 43 ಸ್ಯಾಂಪಲ್ಗಳ ವರದಿ ನೆಗಟಿವ್ ಬಂದಿರುತ್ತವೆ. ಜಿಲ್ಲಾ ಆಸ್ಪತ್ರೆಯ ಕೋವಿಡ್ ಪರೀಕ್ಷೆಯ ಲ್ಯಾಬ್ನಲ್ಲಿ 9 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿ ಎಲ್ಲವೂ ನೆಗಟಿವ್ ವರದಿಯಾಗಿವೆ. ಹೊಸದಾಗಿ ಪ್ರಾರಂಭಿಸಲಾದ ಕೋವಿಡ್ ಪರೀಕ್ಷೆ ಲ್ಯಾಬ್ನಲ್ಲಿ ಇಲ್ಲಿಯವರೆಗೆ ಒಟ್ಟು 15 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಿಂದ ಹೊಸದಾಗಿ ಮತ್ತೆ 109 ಜನರ ಗಂಟಲು ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿರುವುದಾಗಿ ತಿಳಿಸಿದ್ದಾರೆ.
ಸದ್ಯ ಇನ್ಸ್ಟಿಟ್ಯೂಶನಲ್ ಕ್ವಾರಂಟೈನ್ನಲ್ಲಿ 1575 ಜನ ನಿಗಾದಲ್ಲಿದ್ದು, ಇಲ್ಲಿಯವರೆಗೆ ಒಟ್ಟು 4886 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ 4690 ನೆಗಟಿವ್ ಪ್ರಕರಣ, 71 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತವೆ. ಕಂಟೈನ್ಮೆಂಟ್ ಝೋನ್ಗಳು 8 ಇದ್ದು, ಒಟ್ಟು 9 ಸ್ಯಾಂಪಲ್ ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಇನ್ಸ್ಟಿಟ್ಯೂಶನ್ ಕ್ವಾರಂಟೈನ್ ಪೂರ್ಣಗೊಂಡ 288 ಜನರನ್ನು ಬಿಡುಗಡೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!