Saturday, July 2, 2022

Latest Posts

ಬಾಗ್ದಾದ್‌ನ ರಾಯಭಾರ ಕಚೇರಿ ಬಳಿ ಏಕಾಏಕಿ ಏಳು ರಾಕೆಟ್ ದಾಳಿ  

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಬಾಗ್ದಾದ್‌ನ ರಾಯಭಾರ ಕಚೇರಿ ಮತ್ತು ಸರ್ಕಾರಿ ಕಟ್ಟಡಗಳಿರುವ ಸ್ಥಳಕ್ಕೆ ರಾಕೆಟ್ ದಾಳಿ ನಡೆಡದಿದ್ದು, ಘಟನೆಯಲ್ಲಿ ಮಗುವೊಂದು ಸಾವನ್ನಪ್ಪಿ, ಐವರು ಗಾಯಗೊಂಡಿದ್ದಾರೆ ಎಂದು ಇರಾಕಿ ಭದ್ರತಾ ಪಡೆ ತಿಳಿಸಿವೆ.

ಹಸಿರು ವಲಯ ಎಂದು ಗುರುತಿಸಲಾದ ಈ ಸ್ಥಳದ ಸುತ್ತಮುತ್ತ ಏಕಾಏಕಿ ಏಳು ರಾಕೆಟ್‌ಗಳು ಅಪ್ಪಳಿಸಿವೆ. ಇವುಗಳ ಪೈಕಿ ನಾಲ್ಕು ಹಸಿರು ವಲಯದಲ್ಲಿ ಬಿದ್ದಿದ್ದರೆ, ಮೂರು ಹಸಿರು ವಲಯದ ಹೊರಗೆ, ಒಂದು ಗಾಳಿಯಲ್ಲಿ ಸ್ಫೋಟಗೊಂಡಿದೆ. ಈ ಸಂದರ್ಭ ಮಗು ಸಾವನ್ನಪ್ಪಿದ್ದು, ಇತರ ಐವರು ನಾಗರಿಕರು ಗಾಯಗೊಂಡಿದ್ದಾರೆ ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss