ಬಾಗ್ದಾರ್: ಇರಾನ್ 24 ಗಂಟೆಗಳಲ್ಲಿ ಇರಾಕಿನಲ್ಲಿರುವ ಹಸಿರು ವಲಯದ ಅಮೇರಿಕಾ ರಾಯಭಾರಿ ಕಛೇರಿಗಳಿಗೆ 2 ರಾಕೆಟ್ಗ ಳಿಂದ ದಾಳಿ ನಡೆಸಿದೆ.
ಇರಾಕಿನಲ್ಲಿ ಸುರಕ್ಷಾ ಸ್ಥಳವೆಂದು ಪರಿಗಣಿಸಿದ್ದ ಹಸಿರು ವಲಯಕ್ಕೆ ಇರಾನ್ ಮತ್ತೆ ದಾಳಿ ನಡೆಸಿದೆ. ವಿವಿಧ ದೇಶಗಳ ರಾಯಭಾರಿ ಕಛೇರಿಗಳು ಹಸಿರು ವಲಯದಲ್ಲಿರುವುದನ್ನು ಗುರಿಯಾಗಿಸಿ ಇರಾನ್ ದಾಳಿ ನಡೆಸಿದೆ. ಟ್ರಂಪ್ ಇರಾನಿಗೆ ಎಚ್ಚರಿಕೆ ನೀಡಿದ ನಂತರವೇ ಈ ದಾಳಿ ನಡೆದಿರುವುದೆಂದು ಸುದ್ದಿ ವಲಯ ತಿಳಿಸುತ್ತದೆ.
ಕೆಲವು ದಿನಗಳ ಹಿಂದೆ ದೇಶವನ್ನುದ್ಧೇಶಿಸಿ ಮಾತನಾಡಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ನಮ್ಮ ಮೇಲೆ ದಾಳಿ ನಡೆಸಿದರೂ ನಮ್ಮ ಸೈನಿಕರಿಗೆ ಮತ್ತು ನಮ್ಮ ದೇಶಕ್ಕೆ ಏನು ತೊಂದರೆಯಾಗಿಲ್ಲ ಎಂದು ತಿಳಿಸಿದರು.
ನೆನ್ನೆ ನಡೆದ ದಾಳಿಯಲ್ಲಿ ಯಾವ ಸೈನಿಕನಿಗೂ ತೊಂದರೆಯಾಗಿಲ್ಲ, ಇರಾನ್ ಯಾವುದೇ ಸಂದರ್ಭದಲ್ಲಿ ದಾಳಿ ಮಾಡಿದರು ಅದನ್ನು ಎದುರಿಸಲು ಸೇನೆ ಸಿದ್ದವಾಗಿದೆ ಎಂದಿದ್ದಾರೆ.