Wednesday, August 17, 2022

Latest Posts

ಬಾದಾಮಿ ಬನಶಂಕರಿ ದೇವಿ ದರ್ಶನ ಪಡೆದ ಕೆ. ಎಸ್. ಈಶ್ವರಪ್ಪ ಪುತ್ರ

ಹೊಸದಿಗಂತ ವರದಿ ಬಾಗಲಕೋಟೆ:

ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ ಎಸ್ ಈಶ್ವರಪ್ಪ ಅವರ ಪುತ್ರ ಶಿವಮೊಗ್ಗ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ ಈ ಕಾಂತೇಶ್ ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇವಿ ದರ್ಶನ ಪಡೆದರು.

ಕುರುಬ ಸಮಾಜ ಎಸ್ ಟಿ ಸೇರ್ಪಡೆ ಹೋರಾಟ ಸಮಿತಿಯ ಬೆಳಗಾವಿ ವಿಭಾಗ ಮಟ್ಟದ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ ವೇಳೆ ಕೆ ಈ ಕಾಂತೇಶ್ ಅವರು, ಬಾದಾಮಿ ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.ಬಳಿಕ ಬಾಗಲಕೋಟೆಯ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬನಶಂಕರಿ ದೇವಿ ದರ್ಶನ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ಬಿಜೆಪಿ ಮುಖಂಡ ಮಹಾಂತೇಶ ಮಮದಾಪೂರ,ಜಿಪಂ ಸದಸ್ಯ ಆಸೆಂಗೆಪ್ಪ ನಕ್ಕರಗುಂದಿ, ಹನಮಂತ ಅಪ್ಪನ್ನವರ, ಸೇರಿದಂತೆ ಮುಖಂಡರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!