Thursday, August 11, 2022

Latest Posts

ಬಾಬರಿ ಕಟ್ಟಡ ಧ್ವಂಸ ಪ್ರಕರಣ: ಸತ್ಯಕ್ಕೆ ಸಿಕ್ಕ ಜಯ ಎಂದ ಸಂಸದ ಸಂಗಣ್ಣ ಕರಡಿ

ಕೊಪ್ಪಳ: ಬಾಬರಿ ಕಟ್ಟಡ ಧ್ವಂಸ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಲಖನೌ ಸಿಬಿಐ ನ್ಯಾಯಾಲಯವು ಇದೊಂದು ಆಕಸ್ಮಿಕ ಘಟನೆ, ಪೂರ್ವನಿಯೋಜಿತ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಾಧಾರಗಳು ಸಿಗದ ಕಾರಣ ಪ್ರಕರಣದ ಅಷ್ಟೂ ಆರೋಪಿತರನ್ನು  ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡುವ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಪ್ರಕಟನೆಯ ಮೂಲಕ  ತಿಳಿಸಿದ ಅವರು, ಸುದೀರ್ಘ ಪ್ರಕರಣದ ವಿಚಾರಣೆಯೊಂದು ಸುಖಾಂತ್ಯ ಕಂಡಿದ್ದು ಸಂತಸದ ವಿಷಯ. ನಮ್ಮ ಪಕ್ಷದ ಹಿರಿಯ ನಾಯಕರು ದೋಷಮುಕ್ತ ಆಗಿರುವುದು ಸಂಸತದ ಸಂಗತಿ. ಇಂತಹ ಪ್ರಕರಣಗಳನ್ನು ಜೀವಂತ ಇಟ್ಟು ಅಭಿವೃದ್ಧಿ ಮರೆತಿದ್ದ ಕಾಂಗ್ರೆಸ್ ಗೆ ಈಗಲಾದರೂ ಬುದ್ಧಿ ಬರಬೇಕಿದೆ.  ಕೋರ್ಟ್ ನ ತೀರ್ಪು ಸ್ವಾಗತಾರ್ಹ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss