Wednesday, August 17, 2022

Latest Posts

ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಸಂತಸ ತಂದಿದೆ: ಸತ್ಯಕ್ಕೆ ಸಂದ ಜಯ: ಮುಖ್ಯಮಂತ್ರಿ ಬಿ.ಎಸ್ ವೈ

ಬೆಂಗಳೂರು: ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋ ನ ಸಿಬಿಐ ನ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಮುಖ್ಯಮಂತ್ರಿ ಬಿ.ಎಸ್.ವೈ ಸಂತಸದಿಂದ ಸ್ವೀಕರಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಎಲ್ಲಾ ಭಾರತೀಯರು ಸಂತೋಷ ಪಡುವ ದಿನವಾಗಿದ್ದು, ನಾವು ಕೂಡ ಈ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ನನಗೆ ವೈಯಕ್ತಿಕ ಸಂತಸವಾಗಿದೆ ಎಂದರು.

ಟ್ವೀಟ್ ಮಾಡಿರುವ ಅವರು, ಸತ್ಯಮೇವ ಜಯತೇ! ಬಾಬ್ರಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಇದು ಪೂರ್ವನಿಯೋಜಿತ ಕೃತ್ಯವಲ್ಲ ಎಂದು ನ್ಯಾಯಾಲಯ ಹೇಳಿದ್ದು, ಅಡ್ವಾಣಿಜೀ, ಮುರಳಿ ಮನೋಹರ್ ಜೋಷಿಜೀ, ಸಾಧ್ವಿ ಉಮಾಭಾರತಿ ಸೇರಿದಂತೆ ಅನೇಕ ಮುಖಂಡರು, ಸಂತರು, ವಿ.ಹೆಚ್.ಪಿ ಕಾರ್ಯಕರ್ತರನ್ನು ಖುಲಾಸೆಗೊಳಿಸಿದ್ದು ಸತ್ಯಕ್ಕೆ ಜಯ ಸಂದಿದೆ ಎಂದು ಹರುಷ ಹಂಚಿಕೊಂಡಿದ್ದಾರೆ.

28 ವರ್ಷಗಳ ಹಿಂದೆ ನಡೆದ ಬಾಬ್ರಿ ಕಟ್ಟಡ ಧ್ವಂಸ ಪ್ರಕರಣಕ್ಕೆ ಸಂಭಂದಿಸಿದಂತೆ ಲಕ್ನೋ ನ್ಯಾಯಾಲಯ ಬುಧವಾರ ಐತಿಹಾಸಿಕ ತೀರ್ಪು ನೀಡಿದ್ದು, ಪ್ರಕರಣದಲ್ಲಿ ಆರೋಪಿಗಳಾಗಿದ್ದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳನ್ನು ನಿರ್ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!