ಮೂಲ್ಕಿ: ಅಯೋಧ್ಯೆಯ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ಅಂತಿಮ ತೀರ್ಪು ಸ್ವಾಗತಾರ್ಹವಾಗಿದೆ. ಈ ತೀರ್ಪಿನ ಮೂಲಕ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಾರ್ವಜನಿಕರು ಇಟ್ಟಿದ್ದ ನಂಬಿಕೆ ವಿಶ್ವಾಸ ಇನ್ನಷ್ಟು ಹೆಚ್ಚಿದೆ ಎಂದು ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷ್ಯಿ ಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದ್ದಾರೆ.
ಒಂದೆಡೆ ರಾಮ ಮಂದಿರ ಭೂಮಿಗೆ ಸಂಬಂಧಿಸಿದ ಐತಿಹಾಸಿಕ ತೀರ್ಪು ಹೊರಬಂದು, ರಾಮ ಮಂದಿರ ನಿರ್ಮಾಣ ಕರ್ಯ ಆರಂಭಗೊಂಡಿದೆ. ಇಂತಹ ಪರ್ವ ಕಾಲದಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬಾಕಿ ಇತ್ತು. ಒಂದು ಹಂತದಲ್ಲಿ ಭಾರತೀಯ ರಾಜಕೀಯದಲ್ಲಿ ಭೀಷ್ಮ ಎಂದೇ ಕರೆಸಿಕೊಂಡಿದ್ದ ಲಾಲ್ ಕೃಷ್ಣ ಆಡ್ವಾಣಿ ಅವರು ರಾಜಕೀಯ ಜೀವನವೇ ಮೊಡಕುಗೊಂಡಿತ್ತು. ಅವರ ಮೇಲೆ ಆರೋಪದಿಂದಾಗಿ ಕಳಂಕ ಎದುರಿಸುತಿದ್ದರು. ಇದೀಗ ಲಾಲ್ಕೃಷ್ಣ ಆಡ್ವಾಣಿ ಸೇರಿದಂತೆ ೩೨ ಪ್ರಮುಖ ನಾಯಕರನ್ನು ಆರೋಪ ಮುಕ್ತಗೊಳಿಸಿದೆ. ಬಾಬ್ರಿ ಮಸೀದಿ ಧ್ವಂಸ ಘಟನೆ ಪೂರ್ವನಿಯೋಜಿತ ಕೃತ್ಯ ಅಲ್ಲ. ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಿದೆ ಎಂದು ನ್ಯಾಯಾಲಯದ ತೀರ್ಪು ಶ್ರೇಷ್ಠ ತೀರ್ಪಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ದಿದ್ದಾರೆ.
ರಾಮಾವತಾರದಲ್ಲಿ ಶ್ರೀರಾಮನು ಎಲ್ಲಾ ಲೋಕಕಂಠಕವನ್ನು ಪರಿಹರಿಸಿದ ಬಳಿಕ ಸಿಂಹಾಸನರೂಢನಾಗುತ್ತಾನೆ. ಅಂದರೆ ಲೋಕದಲ್ಲಿ ಶಾಂತಿ ನೆಲೆಸಿದ ಬಳಿಕ ಸಿಂಹಾಸನರೂಢರಾಗುತ್ತಾರೆ. ಶ್ರೀರಾಮನ ಅವತಾರದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸಾಮಾಜಿಕ ಕ್ರಾಂತಿಯಾಗಿ, ನ್ಯಾಯಾಲಯದಲ್ಲಿ ಹೋರಾಟವಾಗಿತ್ತುö. ಆಯೋಧ್ಯೆ ಮಂದಿರ ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳ ತೀರ್ಪು ಹೊರಬಂದಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಶ್ರೀರಾಮನ ಬದುಕಿನಂತೆ ಎಲ್ಲ ರೀತಿಯ ಕಳಂಕದಿಂದ ಮುಕ್ತಗೊಂಡು ವಿಶ್ವಮಾನ್ಯ ಮಂದಿರ ನಿರ್ಮಾಣವಾಗಲಿದೆ ಎಂದು ಸ್ವಾಮೀಜಿ ಹೇಳಿದರು.