ಕೆಲವೊಬ್ಬರಿಗೆ ಬಾಯಿ ಕೆಟ್ಟವಾಸನೆ ಬರುತ್ತದೆ. ಹಲ್ಲು ತಿಕ್ಕಿ ಬಾಯಿ ಕ್ಲೀನ್ ಇಟ್ಟುಕೊಂಡರೂ ಒಮ್ಮೊಮ್ಮೆ ಕೆಟ್ಟವಾಸನೆ ಬರುತ್ತದೆ. ಅದು ಅನುವಂಶಿಯವಾಗಿಯೂ ಒಮ್ಮೊಮ್ಮೆ ಬರುತ್ತದೆ. ಬಾಯಿ ದುರ್ಗಂಧದಿಂದ ತುಂಬಾ ಸಲಿ ನೀವು ಮುಜಗರಕ್ಕೀಡಾಗುವಂತಾಗುತ್ತದೆ. ಜನರು ನಮ್ಮೆದುರು ಮಾತನಾಡಲು ಹಿಂಜರಿಯುತ್ತಾರೆ. ಇದರ ಬಗ್ಗೆ ಚಿಂತಿಸುವುದು ಬೇಡ. ಮನೆ ಮದ್ದುಗಳು ಸಾಕಷ್ಟಿವೆ. ಬಾಯಿ ದುರ್ಗಂಧ ಹೋಗಲಾಡಿಸಬಹುದು.
ಲವಂಗ:
ಲವಂಗದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಇದು ನಿಮ್ಮ ಬಾಯಿಯನ್ನು ತಾಜಾತನದಿಂದ ಇರುವಂತೆ ಮಾಡುತ್ತದೆ. ದಿನವೂ ಊಟದ ನಂತರ ಇದನ್ನು ಒಂದು ಸೇವಿಸಬೇಕು. ಮತ್ತು ಹಲ್ಲು ನೋವು ಕೂಡ ಇದರಿಂದ ನಿವಾರಣೆಯಾಗುತ್ತದೆ. ಲವಂಗವನ್ನು ನೀರಿಗೆ ಹಾಕಿ ಇದರ ನೀರಿನಲ್ಲಿ ಬಾಯಿ ಮುಕ್ಕಳಿಸಬಹುದು.
ವಿಳ್ಯದೆಲೆಯ ಕವಳ:
ನಿತ್ಯ ಒಂದು ಕವಳ ಹಾಕುವುದನ್ನು ರೂಢಿಸಿಕೊಳ್ಳಿ. ವೀಳ್ಯದೆಲೆ ಅಡಿಕೆ ಹಾಕಿ ಕವಳ ಮಾಡಿಕೊಂಡು ಸೇವಿಸಿ. ವೀಳ್ಯದೆಲೆಯಲ್ಲಿರುವ ಪರಿಮಳ ಬಾಯಿಯವಾಸನೆಯನ್ನು ತಡೆಯುತ್ತದೆ. ಮತ್ತು ಬಾಯಿ ಶುದ್ಧವಾಗಿರುತ್ತದೆ.
ಜೀರಿಗೆ:
ಜೀರಿಗೆಯಲ್ಲಿ ಇರುವ ಸೂಕ್ಷ್ಮಾಣು ವಿರೋಧಿ ಗುಣ ಬಾಯಿಯ ದುರ್ಗಂಧ ಬರದಂತೆ ತಡೆಯುತ್ತದೆ. ಇದು ದೇಹಕ್ಕೂ ಕೂಡ ಒಳ್ಳೆಯದು ನಿಮ್ಮ ದೇಹದ ಉಷ್ಣತೆಯನ್ನು ಜೀರಿಗೆ ಕಡಿಮೆ ಮಾಡುತ್ತದೆ. ನಿತ್ಯ ಊಟವಾದ ಮೇಲೆ ಜೀರಿಗೆ ಸೇವಿಸುವುದರಿಂದ ಬಾಯಿಯವಾಸನೆಯನ್ನು ತಡೆಯಬಹುದು.
ಓಮ್ ಕಾಳುಗಳು:
ಓಮಿನ ಕಾಳುಗಳನ್ನು ಹಲ್ಲು ಉಜ್ಜಿದ ನಂತರ ತಿನ್ನಬೇಕು. ಓಮಿನಲ್ಲಿರುವ ಕೀಟನಾಶಕ ಶಕ್ತಿ ಬಾಯಿಯಲ್ಲಿ, ಹಲ್ಲುಗಳಲ್ಲಿ ಅಡಗಿರುವ ಕೀಟನಾಶಕಗಳನ್ನು ಕೊಲ್ಲುತ್ತದೆ. ಮತ್ತು ಬಾಯಿ ಶುದ್ಧವಾಗಿರುವಂತೆ ಮಾಡುತ್ತದೆ. ಆಗಾಗ ಓಮಿನ ಕಾಳುಗಳನ್ನು ಸೇವಿಸಬೇಕು.
ಸೋಂಪು ಕಾಳುಗಳು:
ಸೂಕ್ಷ್ಮಾಣು ಜೀವಿ ವಿರೋಧಿ ಗುಣವನ್ನು ಹೊಂದಿರುವ ಸೋಂಪು ಕಾಳುಗಳು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಸ್ವಲ್ಪ ಸೋಂಪು ಕಾಳುಗಳನ್ನು ಬಾಯಿಯಲ್ಲಿ ಹಾಕಿಕೊಂಡು ಜಗಿಯಿರಿ. ಇದು ಜೊಲ್ಲುರಸವನ್ನು ಉತ್ಪತ್ತಿ ಮಾಡಿ ಬಾಯಿ ವಾಸನೆ ಕಡಿಮೆ ಮಾಡುವುದು.
ಹೀಗೆ ಹಲ್ಲು ತಿಕ್ಕಿರಿ:
ಹಲ್ಲುಗಳನ್ನು ತಿಕ್ಕುವುದಕ್ಕೂ ಒಂದು ಶಿಸ್ತು ಇರುತ್ತದೆ. ಹಲ್ಲು ತಿಕ್ಕುವುದು ಎಂದರೇ ಕೇವಲ ಹಲ್ಲು ಒಂದನ್ನೇ ತಿಕ್ಕುವುದಲ್ಲ. ನಾಲಿಗೆ, ದಂತ, ವಸಡುಗಳನ್ನೂ ಸಹ ತಿಕ್ಕಬೇಕು. ಆಹಾರ ಪದಾರ್ಥಗಲು ವಸಡಿನಲ್ಲಿಯೂ ಸಿಕ್ಕಿಕೊಂಡು ವಾಸನೆ ಬರುತ್ತದೆ. ಹಾಗಾಗಿ ಇಡೀ ಬಾಯಿಯನ್ನೇ ಕ್ಲೀನ್ ಮಾಡಿ ತಿಕ್ಕಬೇಕು.