Friday, August 12, 2022

Latest Posts

ಬಾಯಿ ದುರ್ವಾಸನೆ ದೂರ ಮಾಡಲು ಇಲ್ಲಿದೆ ಸುಲಭ ಮನೆಮದ್ದು| ಈ ಟಿಪ್ಸ್ ಅನುಸರಿಸಿ ನೋಡಿ

ಬಾಯಿ ದುರ್ವಾಸನೆ ಬರುವುದಕ್ಕೆ ಸಾಕಷ್ಟು ಕಾರಣಗಳಿದ್ದರು ಕೆಲವೊಮ್ಮೆ ಆಲಸ್ಯ, ಆರೋಗ್ಯದ ನಿರ್ಲಕ್ಷ್ಯ, ಆಹಾರ ಪದ್ಧತಿಯೂ ಕಾರಣವಾಗುತ್ತದೆ. ಹೌದು ಸಹಜವಾಗಿ ದೀರ್ಘ ಕಾಲ ನಿದ್ದೆ ಮಾಡಿ ಎದ್ದೆರೆ ಬಾಯಿ ವಾಸನೆ ಬರುತ್ತದೆ ಆದರೆ ಮತ್ತೂ ಕೆಲವರಿಗೇ ಏನು ಇಲ್ಲದಿದ್ದರೂ ದಿನಪೂರ್ತಿ ಬಾಯಿಂದ ವಾಸನೆ ಬರುತ್ತದೆ. ಇದರಿಂದ ನಮ್ಮ ಆರೋಗ್ಯವೂ ಹಾಳಾಗುತ್ತದೆ.

ಅಂತಹ ತೊಂದರೆಗಳನ್ನು ದೂರ ಮಾಡಲು ಇಲ್ಲಿದೆ ಸುಲಭ ಮನೆ ಮದ್ದು..

ಸೇಬು: ಪ್ರತಿದಿನ ಸೇಬು ತಿನ್ನುವುದರಿಂದ ನಮ್ಮ ಉಸಿರಿನಲ್ಲಿನ ವಾಸನೆ ಕಡಿಮೆಗೊಳಿಸಲು ಸಹಾಯವಾಗುತ್ತದೆ.

ನೀರು: ದೀರ್ಘ ಕಾಲ ನಿದ್ದೆ ಮಾಡುವುದು ಅಥವಾ ಮಾತನಾಡದೆ ಇರುವುದರಿಂದ ನಮ್ಮ ದೇಹ ಡೀಹೈಡ್ರೇಟ್ ಆಗಿರುತ್ತದೆ. ಆಗಾಗ ನೀರು ಕುಡಿಯುವುದರಿಂದ ಬಾಯಲ್ಲಿನ ವಾಸನೆ ಬರುವುದು ಕಡಿಮೆಯಾಗುತ್ತದೆ.

ಕಿತ್ತಳೆ ಹಣ್ಣು: ಎಷ್ಟೋ ಜನರಿಗೆ ಲಾಲಾರಸ ಉತ್ಪತ್ತಿ ಆಗದ ಕಾರಣ ಅವರ ಬಾಯಿ ವಾಸನೆ ಬರುತ್ತದೆ. ಅಂತವರು ಕಿತ್ತಳೆ ಹಣ್ಣು ತಿನ್ನುವುದರಿಂದ ಅದರಲ್ಲಿನ ವಿಟಮಿನ್ ಸಿ ಅಂಶವು ಲಾಲಾರಸ ಹೆಚ್ಚಿಸುವುದಕ್ಕೆ ಸಹಕಾರಿಯಾಗಿ ದುರ್ವಾಸನೆ ಕಡಿಮೆ ಮಾಡುತ್ತದೆ.

ಗ್ರೀನ್ ಟೀ: ಗ್ರೀನ್ ಟೀ ಕುಡಿಯುವುದರಿಂದ ನಮ್ಮ ಉಸಿರಾಟ ಫ್ರೆಶ್ ಆಗುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ನಿವಾರಿಸುವ ಗುಣವಿದ್ದು, ದಿನಕ್ಕೆ 2 ರಿಂದ 3 ಕಪ್ ಗ್ರೀನ್ ಟೀ ಕುಡಿಯುವುದು ಒಳ್ಳೆಯದು.

ಏಲಕ್ಕಿ: ಆಹಾರ ಸೇವಿಸಿದ ನಂತರ ದುರ್ವಾಸೆ ಬಂದರೆ ಏಲಕ್ಕಿಯನ್ನು ಅಗಿದು ತಿನ್ನುವುದರಿಂದ ಬಾಯಲ್ಲಿನ ವಾಸನೆ ದೂರಾಗುತ್ತದೆ.

ಅನಾನಸ್ ಜ್ಯೂಸ್: ಪ್ರತಿ ಊಟದ ಬಳಿಕ ಅನಾನಸ್ ಜ್ಯೂಸ್ ಅಥವಾ ಹಣ್ಣನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆ ಶೀಘ್ರವಾಗಿ ದೂರವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss