Friday, July 1, 2022

Latest Posts

ಬಾರದ ಲೋಕಕ್ಕೆ ಪಾಪು ಪಯಣ: ಗಣ್ಯರಿಂದ ಗೌರವ ನಮನ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ ನಡೆಯಿತು. ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದ ಪ್ರಕಾರ ಕ್ರಿಯಾ ಸಮಾಧಿ ನೆರವೇರಿತು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಪಾರ್ಥಿವ ಶರೀರ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಶಿಗ್ಗಾವಿಯಲ್ಲಿ ಸಾಹಿತಿಗಳು, ಗಣ್ಯರು, ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು.

ಜಿಲ್ಲಾ ಕೇಂದ್ರ ಹಾವೇರಿಯ ಹುತಾತ್ಮ ಮಹದೇವ ಮೈಲಾರ ವೃತ್ತದಲ್ಲಿ ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ, ತಹಶೀಲ್ದಾರ ಶಂಕರ ಜಿ.ಎಸ್., ಮಾಜಿ ಸಚಿವ ಬಸವರಾಜ ಶಿವಣ್ಣಮವರ, ಜಿ.ಪಂ.ಮಾಜಿ ಅಧ್ಯಕ್ಷ ಪೆಮೇಶಪ್ಪ ಮೇಗಳಮನಿ, ಕಸಾಪ ತಾಲೂಕು ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಸತೀಶ ಕುಲಕರ್ಣಿ, ಪೃಥ್ವಿರಾಜ ಬೆಟಗೇರಿ ಸೇರಿದಂತೆ ಅನೇಕ ಸಾಹಿತಿಗಳು ನುಡಿ ನಮನ ಸಲ್ಲಿಸಿದರು.

ಹಾವೇರಿಯಿಂದ ರಾಣೇಬೆನ್ನೂರಿನ ಶಿವಾ ಕಾಲೇಜಿನ ಆವರಣದಲ್ಲಿ ಕೆಲ ಕಾಲ ಪಾರ್ಥಿವ ಶರೀರವನ್ನು ಇರಿಸಿ ನಂತರ ಪಾಪು ಅವರ ಸ್ವಗ್ರಾಮ ರಾಣೇಬೆನ್ನೂರ ತಾಲೂಕಿನ ಹಲಗೇರಿ ಗ್ರಾಮಕ್ಕೆ ತರಲಾಯಿತು. ಹಲಗೇರಿ ಗ್ರಾಮದ ದೊಡ್ಡ ಜಟ್ಟಪ್ಪನವರ ಸಭಾಭವನದಲ್ಲಿ ಕೆಲ ಕಾಲ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಯಿತು.

ಹಲಗೇರಿ ಗ್ರಾಮದಲ್ಲಿ ಪಾಪು ಅವರ ಪಾರ್ಥಿವ ಶರೀರವನ್ನು ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಅವರ ಪಿತ್ರಾರ್ಜಿತ ಅಡಿಕೆ ತೋಟದಲ್ಲಿ ವೀರಶೈವ ಲಿಂಗಾಯತ ವಿಧಿ ವಿಧಾನದಂತೆ ಕ್ರೀಯಾ ಸಮಾಧಿಯನ್ನು ನೆರೆವೇರಿಸಲಾಯಿತು.

ಗಣ್ಯರಿಂದ ಅಂತಿಮ ದರ್ಶನ: ಈ ಸಂದರ್ಭದಲ್ಲಿ ಶಿರಗೇರಿ ತರಳಬಾಳು ಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ, ಕೂಡಲ ಸಂಗಮದಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ, ಬೃಹತ್ ಕೈಗಾರಿಕಾ ಸಚಿವ ಜಗದೀಶ ಶಟ್ಟರ, ಶಾಸಕ ಅರುಣಕುಮಾರ ಗುತ್ತೂರ, ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ, ಮಾಜಿ ಸಚಿವ ಎಚ್.ಕೆ. ಪಾಟೀಲ, ರುದ್ರಪ್ಪ ಲಮಾಣಿ, ಮಾಜಿ ಸಂಸದರಾದ ಐ.ಜಿ.ಸನದಿ, ಮಂಜುನಾಥ ಕುನ್ನೂರ, ಡಿ.ಆರ್.ಪಾಟೀಲ, ಜಿ.ಪಂ.ಅಧ್ಯಕ್ಷ ಬಸನಗೌಡ ದೇಸಾಯಿ, ಜಿ.ಪಂ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಜಿಲ್ಲಾಧಿಕಾರಿ ಕೃಷ್ಣ ವಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿ.ಪಂ ಸಿಇಒ ರಮೇಶ ದೇಸಾಯಿ, ಎಸಿ ಶಶಿಕಾಂತ ಸಸಿ, ಎಡಿಸಿ ಎಸ್.ಯೋಗೇಶ್ವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಪೊಲೀಸ್ ಇಲಾಖೆ ಮೂರು ಸುತ್ತು ಕುಶಾಲ ತೋಪು ಹಾರಿಸುವ ಮೂಲಕ ಗೌರವ ಸಲ್ಲಿಸಿದರು. ಪಾರ್ಥಿವ ಶರೀದ ಮೇಲಿದ್ದ ರಾಷ್ಟ್ರ ಧ್ವಜವನ್ನು ಅವರ ಮಗನಾದ ಅಶೋಕ ಪಾಟೀಲ ಅವರಿಗೆ ಹಸ್ತಾಂತರ ಮಾಡಲಾಯಿತು. ಸಕಲ ಸರ್ಕಾರಿ ಗೌರವದಿಂದ ನಮನ ಸಲ್ಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss