Monday, July 4, 2022

Latest Posts

ಬಾರಾಮುಲ್ಲಾ ಎನ್ಕೌಂಟರ್: ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಬಾರಾಮುಲ್ಲಾದಲ್ಲಿ ನಡೆದ ಎನ್ಕೌಂಟರ್​​ನಲ್ಲಿ ಉಗ್ರರ ದಾಳಿಗೆ ಸಿಆರ್​ಪಿಎಫ್​ನ ಇಬ್ಬರು ಯೋಧರು ಹಾಗೂ ಓರ್ವ ಪೊಲೀಸ್​ ಹುತಾತ್ಮರಾದ ಬೆನ್ನಲ್ಲೇ ಸೇನೆ ಇದೀಗ ಲಷ್ಕರ್ ಕಮಾಂಡರ್ ಉಗ್ರ ಸಜ್ಜದ್ ನನ್ನು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಕೇಂದ್ರ ಮೀಸಲು ಪೊಲೀಸ್​ ಪಡೆ (ಸಿಆರ್​ಪಿಎಫ್) ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಬ್ಬರು ​ಯೋಧರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದರು. ಬಳಿಕ ಕ್ರೀರಿ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಸೇನಾ ಮೂಲಗಳ ಪ್ರಕಾರ ಎನ್ ಕೌಂಟರ್ ನಲ್ಲಿ ಭಾರತೀಯ ಯೋಧರು ಲಷ್ಕರ್​ ಎ ತೊಯ್ಬಾದ ಉನ್ನತ ಕಮಾಂಡರ್​ ಸಜ್ಜಾದ್​​ನನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಜಮ್ಮುಕಾಶ್ಮೀರದ ಐಜಿ ವಿಜಯ್​ಕುಮಾರ್​ ಅವರು ಮಾಹಿತಿ ನೀಡಿದ್ದು, ಲಷ್ಕರ್​ ಎ ತೊಯ್ಬಾದ ಸಜ್ಜಾದ್​ ಅಲಿಯಾಸ್​ ಹೈದರ್​​ನನ್ನು ಹತ್ಯೆ ಮಾಡಲಾಗಿದೆ. ಇದು ಭದ್ರತಾ ಪಡೆ ಮತ್ತು ಪೊಲೀಸರ ಮಹತ್ವದ ಸಾಧನೆ ಎಂದು ಹೇಳಿದ್ದಾರೆ.ದಾಳಿ ನಡೆಸಿದ ಉಗ್ರರ ಪೈಕಿ ಇಬ್ಬರನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದ್ದು, ಮೃತರ ಬಳಿ ಇದ್ದ ಒಂದು ಎಕೆ-47 ರೈಫಲ್​ ಮತ್ತು ಎರಡು ಪಿಸ್ತೂಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಲಷ್ಕರ್​- ಎ -ತೊಯ್ಬಾ ಸಂಘಟನೆಯ ಮೂವರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss