Thursday, August 11, 2022

Latest Posts

ಬಾಲಕಿಯರ ಮೇಲೆ ಅತ್ಯಾಚಾರ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಉತ್ತರ ಪ್ರದೇಶದ ಲಕ್ಷ್ಮಿಪುರಖೇರಿ ಜಿಲ್ಲೆಯ ನೇಪಾಳ ಗಡಿ ಗ್ರಾಮವೊಂದರಲ್ಲಿ ಪುಟ್ಟ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿರುವ ಕಾಮಾಂಧರನ್ನು ನೇಣಿಗೆರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಉತ್ತರ ಪ್ರದೇಶದ ಲಕ್ಷ್ಮಿಪುರಖೇರಿ ಜಿಲ್ಲೆಯ ನೇಪಾಳ ಗಡಿ ಗ್ರಾಮವೊಂದರಲ್ಲಿ ೧೩ವರ್ಷದ ದಲಿತ ಜನಾಂಗಕ್ಕೆ ಸೇರಿದ ಅಪ್ರಾಪ್ತ ಬಾಲಕಿ ಮೇಲೆ ಕಾಮಾಂಧರು ಅತ್ಯಾಚಾರ ಮಾಡಿ, ಆನಂತರ ಕತ್ತು ಹಿಸುಕಿ ಮನಬಂದAತೆ ಕ್ರೂರವಾಗಿ ಕೊಲೆ ಮಾಡಿರುವ ಅಮಾನವೀಯ ಘೋರ ಕೃತ್ಯ ಮತ್ತು ೬ವರ್ಷದ ಪುಟ್ಟ ಹೆಣ್ಣು ಮಗುವೊಂದರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ದೇಶಕ್ಕೆ ಸ್ವಾತಂತ್ರ÷್ಯ ಬಂದು ೭೪ವರ್ಷಗಳಾಗುತ್ತಿದ್ದರೂ ಸಹ ಇಂತಹ ದುಷ್ಕöÈತ್ಯಗಳು ಆಗಿಂದ್ದಾಗ್ಗೆ ನಡೆಯುತ್ತಿರುವುದರಿಂದ, ದೇಶದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ, ಫೊಕ್ಸೋ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಲ್ಲಿದ್ದರೂ, ಕಾನೂನನ್ನು ಲೆಕ್ಕಿಸದೆ ರಾಜಾರೋಷವಾಗಿ ನಿರ್ಭಯವಾಗಿ ಅತ್ಯಾಚಾರ, ಹತ್ಯೆ ನಡೆಸುವ ದುಷ್ಕರ್ಮಿಗಳ ಪರ ನ್ಯಾಯವಾದಿಗಳು ವಕಾಲತ್ತು ಮಾಡಬಾರದೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಾನವೀಯ ಮತ್ತು ಮನುಷ್ಯತ್ವಕ್ಕೆ ಬೆಲೆ ನೀಡದ ಪೈಶಾಚಿಕ ಕೃತ್ಯ ಎಸಗುವ ವ್ಯಕ್ತಿಗಳು ಜೀವಿತಾವಧಿ ಸೆರೆಮನೆಯಲ್ಲೇ ಉಳಿಯುವಂತಹ ಕಾನೂನು ತಿದ್ದುಪಡಿ ತಂದು ದೇಶದಲ್ಲಿ ಜಾರಿಗೊಳಿಸಬೇಕು. ಯಾವುದೇ ಕ್ಷಮಾಪಣೆ ನೀಡದೆ ಗಲ್ಲಿಗೇರಿಸುವಂತಹ ನಿಯಮ ಪ್ರಬಲವಾಗಬೇಕೆಂದು ಒತ್ತಾಯಿಸಿದರು. ದಲಿತ,ಮಹಿಳೆ,ಮಕ್ಕಳ ಮೇಲಿನ ದೌರ್ಜನ್ಯ ಅತ್ಯಾಚಾರ,ಹತ್ಯೆ ನಿಯಂತ್ರಿಸುವಲ್ಲಿ ಉತ್ತರ ಪ್ರದೇಶ ಸರ್ಕಾರ ಸಂಪೂರ್ಣ ವಿಘಲವಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಕೂಡಲೇ ರಾಜೀನಾಮೆ ನೀಡಬೇಕು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ರಾಜ್ಯ ಸಂಚಾಲಕ ಹರಿಹರ ಆನಂದಸ್ವಾಮಿ, ಡಾ.ಅರಕಲಗೂಡು ಎಸ್.ಚಂದ್ರಶೇಖರ್, ಫೈಲ್ವಾನ್ ಕೃಷ್ಣ, ಆರ್ಟಿಸ್ಟ್ ಎಸ್.ನಾಗರಾಜು, ಡಿ.ಎಲ್ ಬಾಬು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss