ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಿಷಿ ಕಪೂರ್ ಸಹೋದರ, ಬಾಲಿವುಡ್ ಹಿರಿಯ ನಟ ರಾಜೀವ್ ಕಪೂರ್ (58) ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಜೀವ್ ಕಪೂರ್ ಸಹೋದರ ರಣಧೀರ್ ಕಪೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ಎದೆನೋವು ಕಾಣಿಸುತ್ತಿದ್ದಂತೆಯೇ ಚೆಂಬೂರಿನ ಐಲೆಕ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ನೀಡುವ ಮೊದಲೇ ಸಹೋದರ ಕೊನೆಯುಸಿರೆಳೆದಿದ್ದ ಎಂದಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ರಿಷಿ ಕಪೂರ್ ಪತ್ನಿ ನೀತು ಕಪೂರ್ ರಾಜೀವ್ ಕಪೂರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ರಾಜೀವ್ ಕಪೂರ್ ನಟನೆ ಜೊತೆ ಚಿತ್ರ ನಿರ್ದೇಶನ, ನಿರ್ಮಾಣ ಕೂಡ ಮಾಡುತ್ತಿದ್ದರು. ‘ಲವರ್ ಬಾಯ್’, ‘ಆಸ್ಮಾ’ ,’ಹಮ್ ತೋ ಚಲೇ ಪರ್ದೇಸ್’ ಮುಂತಾದ ಚಿತ್ರದಲ್ಲಿ ನಟಸಿದ್ದರು,