ನವದೆಹಲಿ: ಮುಂಬೈನಲ್ಲಿರುವ ನಟಿ ಕಂಗನಾ ರನೌತ್ ಕಚೇರಿ ತೆರವುಗೊಳಿಸುವುದಕ್ಕೆ ಬಾಂಬೆ ಹೈ ಕೋರ್ಟ್ ತಡೆ ನೀಡಿದೆ.
ಕೋರ್ಟ್ನಿಂದ ಕಚೇರಿ ತೆರವುಗೊಳಿಸಲು ಅನುಮತಿ ಇಲ್ಲದಿದ್ದರೂ ಮಹಾರಾಷ್ಟ್ರ ಸರ್ಕಾರ ಕಂಗನಾ ರನೌತ್ ಕಚೇರಿ ತೆರವುಗೊಳಿಸಿದ್ದು, ನಟಿ ಕಂಗನಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ತೆರವು ಕಾರ್ಯಾಚರಣೆಗೆ ತಡೆ ನೀಡಿದ್ದು, ಕಂಗನಾ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರವನ್ನು ಕೇಳಿದೆ.
ಇಂದು ಬೆಳಗ್ಗೆ ಕಂಗನಾ ಮುಂಬೈಗೆ ಆಗಮಿಸುವ ಮುನ್ನವೇ ಕಂಗನಾ ಕಚೇರಿಯನ್ನು ತೆರವುಗೊಳಿಸಲಾಗಿತ್ತು. ಈ ಬಗ್ಗೆ ಬೇಸರದಿಂದ ಕಂಗನಾ ರನೌತ್ ಸರಣಿ ಟ್ವೀಟ್ಗಳನ್ನು ಮಾಡಿ ಬೇಸರ ಹೊರಹಾಕಿದ್ದು, ಇದೀಗ ಬಾಂಬೆ ಹೈಕೋರ್ಟ್ ತಡೆ ನೀಡಿದೆ.