Thursday, August 18, 2022

Latest Posts

ಬಾಲಿವುಡ್ ಡ್ರಗ್ಸ್ ದಂಧೆ: ಧರ್ಮ ಪ್ರೊಡಕ್ಷನ್ಸ್ ಕಾರ್ಯಕಾರಿ ನಿರ್ಮಾಪಕ ಕ್ಷಿತಿಜ್ ರವಿಪ್ರಸಾದ್ ಅರೆಸ್ಟ್

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಜೊತೆಗೆ ಅಂಟಿರುವ ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮ ಪ್ರೊಡಕ್ಷನ್ಸ್ ಕಾರ್ಯಕಾರಿ ನಿರ್ಮಾಪಕ ಕ್ಷಿತಿಜ್ ರವಿಪ್ರಸಾದ್ ಅವರನ್ನು ಮಾದಕ ದ್ರವ್ಯ ನಿಯಂತ್ರಣ ದಳ (ಎನ್ ಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ.
ಬಾಲಿವುಡ್ ನಲ್ಲಿ ಮಾದಕ ದ್ರವ್ಯ ದಂಧೆಯ ಆರೋಪದ ಮೇಲೆ ಪ್ರಸಾದ್ ಅವರನ್ನು ಎನ್ ಸಿಬಿ ಶುಕ್ರವಾರ ಬಂಧಿಸಿತ್ತು. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ರ ನಿರ್ಮಾಪಕ ಹಾಗೂ ಧರ್ಮ ಪ್ರೊಡಕ್ಷನ್ ಮಾಲೀಕ ಕರಣ್ ಜೋಹರ್, ಪ್ರಸಾದ್ ಅವರು ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
2019ರ ನವೆಂಬರ್ ನಲ್ಲಿ ಧರ್ಮ ಪ್ರೊಡಕ್ಷನ್ಸ್ ನ ಸೋದರ ಸಂಸ್ಥೆಯಾಗಿದ್ದ ಧರ್ಮಾಟಿಕ್ ಎಂಟರ್ ಟೈನ್ ಮೆಂಟ್ ಗೆ ಪ್ರಸಾದ್ ಅವರು ಸೇರಿಕೊಂಡರು ಎಂದು ಜೋಹರ್ ಹೇಳಿದ್ದರು, ‘ಒಂದು ಪ್ರಾಜೆಕ್ಟ್ ನ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ’ ಎಂದು ಜೋಹರ್ ಹೇಳಿದ್ದರು, ಆದರೆ ಅನುಭವ್ ಚೋಪ್ರಾ ಅವರು ಎನ್ ಸಿಬಿಯಿಂದ ವಿಚಾರಣೆಗೆ ಒಳಪಡಿಸಲಾಗಿತ್ತು. 2011 ರಿಂದ 2013ರ ನಡುವೆ ಅಲ್ಪಾವಧಿಯ ಪ್ರಾಜೆಕ್ಟ್ ಗಳ ಮೇಲೆ ಕೆಲಸ ಮಾಡಿದರು.
ಈಗಾಗಲೇ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ನಟಿ ರಾಕುಲ್ ಪ್ರೀತ್ ಸಿಂಗ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎನ್ ಸಿಬಿ ಮುಂದೆ ಹಾಜರಾಗಿದ್ದಾರೆ. ಮತ್ತಷ್ಟು ಜನರು ಡ್ರಗ್ಸ್ ದಂಧೆಯಲ್ಲಿ ಸಿಕ್ಕಿರುವ ಶಂಕೆ ಇದ್ದು, ಎನ್ ಸಿಬಿ ಆರೋಪಿಗಳ ಬಂಧನಕ್ಕೆ ಬಲೇ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!