Sunday, June 26, 2022

Latest Posts

ಬಾಲಿವುಡ್ ಡ್ರಗ್ಸ್ ದಂಧೆ: ನಟಿ ದೀಪಿಕಾ ಮ್ಯಾನೇಜರ್​ ಕರಿಷ್ಮಾ ಗೆ ಮಧ್ಯಂತರ ರಿಲೀಫ್

ಮುಂಬೈ: ಸುಶಾಂತ್​ ಸಿಂಗ್ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಪ್ರಕರಣದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೊಣೆ ಅವರ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಅವರಿಗೆ ಎನ್​ಡಿಪಿಎಸ್​ನ ವಿಶೇಷ ನ್ಯಾಯಾಲಯ ನವೆಂಬರ್​ 7ರವರೆಗೆ ಮಧ್ಯಂತರ ರಿಲೀಫ್​ ನೀಡಿದೆ.
ನ್ಯಾಯಾಲಯ ಕರಿಷ್ಮಾ ರನ್ನು ನವೆಂಬರ್​ 7ರವರೆಗೆ ಅವರ ಬಂಧನ ಮಾಡದಂತೆ ಆದೇಶ ಹೊರಡಿಸಲಾಗಿದ್ದು, ತನಿಖೆಯಲ್ಲಿ ಸಹಕಾರ ನೀಡುವಂತೆ ತಿಳಿಸಿದೆ. ಬಾಲಿವುಡ್​ನ ಮಾದಕವಸ್ತು ಪ್ರಕರಣದಲ್ಲಿ ಎನ್​ಸಿಬಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಅಕ್ಟೋಬರ್​ 27ರಂದು ಕೇಳಿಕೊಳ್ಳಲಾಗಿತ್ತು. ಆದರೆ ಅವರು ಹಾಜರಾಗಿರಲಿಲ್ಲ. ಅವರು ನಾಪತ್ತೆಯಾಗಿದ್ದಾರೆ ಎಂದು ಎನ್​ಸಿಬಿ ಅಧಿಕಾರಿಗಳು ತಿಳಿಸಿದ್ದರು. ಇದರ ಮಧ್ಯೆ ಎನ್​ಡಿಪಿಎಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು.
ಕಳೆದ ಕೆಲ ದಿನಗಳ ಹಿಂದೆ ಕರಿಷ್ಮಾ ಪ್ರಕಾಶ್ ನಿವಾಸದಲ್ಲಿ ಶೋಧಕಾರ್ಯ ನಡೆಸಿದ ಎನ್​ಸಿಬಿ ಅಧಿಕಾರಿಗಳಿಗೆ 1.7 ಗ್ರಾಂ ಚರಸ್ ಮತ್ತು ಎರಡು ಬಾಟಲ್ ಸಿಬಿಡಿ ಎಣ್ಣೆ ಸಿಕ್ಕಿತು. ಪ್ರಾಥಮಿಕ ತನಿಖೆಯಿಂದ ಕರಿಷ್ಮಾ ಪ್ರಕಾಶ್​ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕವಿರಬಹುದು ಎಂಬ ಕಾರಣದಿಂದ ಸಮ್ಮನ್ಸ್ ನೀಡಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss