Friday, July 1, 2022

Latest Posts

ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಗೋವಾ ನಂಟು?

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ದಂಧೆ ಬಗ್ಗೆ ಮಾಹಿತಿ ಹೊರಬಂದಿದ್ದು, ವಿಚಾರಣೆ ವೇಳೆ  ಪ್ರಕರಣಕ್ಕೆ ಗೋವಾ ನಂಟಿರುವುದು ಇದೀಗ ಬೆಳಕಿಗೆ ಬಂದಿದೆ.
ಎನ್‌ಸಿಬಿ ವಿಚಾರಣೆ ವೇಳೆ ಈ ಮಾಹಿತಿ ಹೊರಬಂದಿದೆ. ಡ್ರಗ್ಸ್ ಡೀಲರ್ ಕರಮ್‌ಜೀತ್‌ನನ್ನು ನಿನ್ನೆ ಬಂಧಿಸಿದ್ದು, ಹತ್ತು ಬಾರಿ ಸುಶಾಂತ್‌ಗೆ ಡ್ರಗ್ಸ್ ನೀಡಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ದೀಪೇಶ್ ಸಾವಂತ್ ಹಾಗೂ ಸಾಮ್ಯುಯೆಲ್ ಮಿರಾಂಡಾ ಮೂಲಕ ಡ್ರಗ್ಸ್ ನೀಡುತ್ತಿದ್ದುದಾಗಿ ತಿಳಿದುಬಂದಿದೆ.
ಗೋವಾ ಮೂಲದ ಪೆಡ್ಲರ್ ಕ್ರಿಸ್ ಕೋಸ್ಟಾನನ್ನು ಕೂಡ ಪೊಲೀಸರು ಬಂಧಿಸಿದ್ದು, ಈತ ಅನುಜ್ ಕೇಸ್ವಾನಿಗೆ ಡ್ರಗ್ಸ್ ನೀಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕ್ರಿಸ್ ಕೋಸ್ಟಾ ಗೋವಾದಲ್ಲಿ ತನ್ನದೇ ಡ್ರಗ್ ಬ್ಯುಸಿನೆಸ್ ನಡೆಸುತ್ತಿದ್ದ ಎನ್ನಲಾಗಿದೆ.
ಈ ಪ್ರಕರಣದ ಪ್ರಮುಖ ಆರೋಪಿ ದ್ವಾಯನೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಈತ ದೀಪೇಶ್ ಹಾಗೂ ಶೋವಿಕ್‌ಗೆ ನೇರವಾಗಿ ಡ್ರಗ್ಸ್ ಸಪ್ಲೇ ಮಾಡುತ್ತಿದ್ದ ಎನ್ನಲಾಗಿದೆ. ಡ್ರಗ್ ಪೆಡ್ಲರ್ ಕೈಜಾನ್ ಇಬ್ರಾಹಿಂ, ಅನುಜ್ ಕೇಸ್ವಾನಿ ಹಾಗೂ ಕರಮ್‌ಜೀತ್ ನಡುವೆ ಲಿಂಕ್ ಆಗಿದ್ದ.  ಆರೋಪಿ ರಿಯಾ ಚರ್ಕವರ್ತಿ ಸಹೋದರ ಶೋವಿಕ್, ಅನುಜ್ ಹಾಗೂ ದ್ವಾಯನೆ ಜೊತೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ರಿಯಾ ಚರ್ಕವರ್ತಿ ವಿಚಾರಣೆ ವೇಳೆ ಸಾರಾ ಅಲಿ ಖಾನ್, ರಾಕುಲ್ ಪ್ರೀತ್, ಡಿಸೈನರ್ ಸಿಮೋನ್ ಖಂಬತ್ತಾ, ಸುಶಾಂತ್ ಸ್ನೇಹಿತೆ ಹಾಗು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್, ಮುಖೇಶ್ ಛಾಬ್ರಾ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss