Wednesday, July 6, 2022

Latest Posts

ಬಾಲಿವುಡ್ ಡ್ರಗ್ಸ್ ಲಿಂಕ್: ಶೀಘ್ರದಲ್ಲೇ ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ಸಿಮೋನೆ ಖಂಬಟ್ಟಾ ಗೆ ಎನ್​​ಸಿಬಿ ನೋಟಿಸ್

ಮುಂಬೈ: ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ಪ್ರಕರಣವು ದಿನೇ ದಿನೇ ವಿವಿಧ ಆಯಾಮವನ್ನು ಪಡೆಯುತ್ತಿದು, ಬಾಲಿವುಡ್ ನಲ್ಲಿ ಸದ್ಯ ಸಂಚಲನ ಮೂಡಿಸುತ್ತಿರುವ ಡ್ರಗ್ಸ್ ಲಿಂಕ್ ಹಲವು ಸಿನಿಮಾ ನಟ ನಟಿಯ ನಿದ್ದೆಗೆಡಿಸಿದೆ.
ಈಗಾಗಲೇ ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿ ರಿಯಾ ಚಕ್ರವತಿ೯ ,ಎನ್​​ಸಿಬಿ ಮುಂದೆ ಹಲವು ಬಾಲಿವುಡ್ ಸ್ಟಾರ್ ಗಳ ಹೆಸರನ್ನು ಹೇಳಿದ್ದಾರೆ. ಈ ಹಿಟ್-ಲಿಸ್ಟ್​ನಲ್ಲಿ 20ಕ್ಕೂ ಹೆಚ್ಚು ಬಾಲಿವುಡ್​ ತಾರೆಗಳಿದ್ದಾರೆ ಎಂದು ಹೇಳಲಾಗಿದೆ.
ಇದರ ಪ್ರಕಾರ ಬಾಲಿವುಡ್ ಸೆಲೆಬ್ರಿಟಿಗಳಾದ ನಟಿ ಸಾರಾ ಅಲಿ ಖಾನ್, ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಫ್ಯಾಷನ್​ ಡಿಸೈನರ್​​ ಸಿಮೋನೆ ಖಂಬಟ್ಟಾ ಇವರಿಗೆ ಶೀಘ್ರದಲ್ಲೇ ನೋಟಿಸ್​ ನೀಡಲಾಗುವುದು ಎಂದು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಉಪ ನಿರ್ದೇಶಕ ಕೆ.ಪಿ.ಎಸ್. ಮಲ್ಹೋತ್ರಾ ಹೇಳಿದ್ದಾರೆ.
ಸುಶಾಂತ್​ ಸಿಂಗ್​ ಜೊತೆಗಿನ ‘ಕೇದಾರನಾಥ್’​ ಸಿನಿಮಾ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ ಸಾರಾ ಅಲಿ ಖಾನ್ (25), ನಟ ಸೈಫ್ ಅಲಿ ಖಾನ್ ಮತ್ತು ಅವರ ಮೊದಲ ಪತ್ನಿ ಅಮೃತ ಸಿಂಗ್ ಅವರ ಪುತ್ರಿಯಾಗಿದ್ದಾರೆ.ರಕುಲ್ ಪ್ರೀತ್ ಸಿಂಗ್ (30) ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದ್ದು, ಸಿಮೋನೆ ಖಂಬಟ್ಟಾ (29) ಫ್ಯಾಷನ್​ ಡಿಸೈನರ್ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss