ಮುಂಬೈ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ದೀಪಿಕಾ ಪಡುಕೋಣೆ ಸೇರಿದಂತೆ ಮೂವರು ಬಾಲಿವುಡ್ ನಟಿಯರು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಶನಿವಾರ ಪ್ರಶ್ನಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಬಾಲಿವುಡ್ನ 12ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದು, ಸತತ 6 ಗಂಟೆಗಳ ವಿಚಾರಣೆಯ ಬಳಿಕ ದೀಪಿಕಾ ಪಡುಕೊಣೆ ಕಚೇರಿಯಿಂದ ಹೊರ ಬಂದಿದ್ದಾರೆ.
ಮುಂಬೈನ ಕೊಲಾಬಾದ ಎವೆಲಿನ್ ಅತಿಥಿ ಗೃಹದಲ್ಲಿ ನಟಿಯನ್ನು ಪ್ರಶ್ನಿಸಲಾಗಿದ್ದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿದೆ.
ನಟಿಯರಾದ ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರೊಂದಿಗೆ ದೀಪಿಕಾ ಪಡುಕೋಣೆ ಅವರನ್ನು ಮಾದಕವಸ್ತು ವಿರೋಧಿ ಸಂಸ್ಥೆ ವಿಚಾರಣೆಗೆ ಕರೆಸಿಕೊಂಡಿದ್ದು, ಇಬ್ಬರನ್ನೂ ಎನ್ಸಿಬಿಯ ಬಲ್ಲಾರ್ಡ್ ಎಸ್ಟೇಟ್ ಕಚೇರಿಯಲ್ಲಿ ಪ್ರತ್ಯೇಕವಾಗಿ ಪ್ರಶ್ನಿಸಲಾಗಿದೆ.
ಪಡುಕೋಣೆ ಅವರ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರನ್ನು ಸತತ ಎರಡನೇ ದಿನವೂ ಪ್ರಶ್ನಿಸಲಾಗುತ್ತಿದೆ.