Sunday, August 14, 2022

Latest Posts

ಬಾಲಿವುಡ್ ತಾರೆಯರಿಗಾಗಿ ಸಿಬಿಡಿ ತೈಲ ಖರೀದಿಸಿದ್ದನ್ನು ಒಪ್ಪಿಕೊಂಡ ಜಯ ಸಹಾ: ಯಾವ ತಾರೆಯರಿದ್ದಾರೆ?

ನವದೆಹಲಿ: ನಟ ಸುಶಾಂತ್ ಸಿಂಗ್ ರಾಜಪೂತ್ ಮಾಜಿ ಟ್ಯಾಲೆಂಟ್ ಮ್ಯಾನೇಜರ್ ಜಯಾ ಸಹಾ ನಟಿ ತನಗೆ, ಸುಶಾಂತ್ ಸಿಂಗ್ ರಜಪೂತ್, ರಿಯಾ ಚಕ್ರವರ್ತಿ ಶ್ರದ್ಧ ಕಪೂರ್ ಹಾಗೂ ನಿರ್ಮಾಪಕ ಮಧು ಮಂಟೆನಾ ಅವರಿಗೆ ಸಿಬಿಡಿ ತೈಲವನ್ನು ಆರ್ಡರ್ ಮಾಡಿದ್ದಾಗಿ ಹೇಳಿದ್ದಾರೆ.
ಆರು ಗಂಟೆಗಳ ಕಾಲ ಎನ್‌ಸಿಬಿ ಪ್ರಶ್ನಿಸಿದ್ದು, ಈ ವಿಷಯ ಬಯಲಾಗಿದೆ. ನನಗಾಗಿಯೂ ಸಿಬಿಡಿ ತೈಲವನ್ನು ಆರ್ಡರ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ವಿಚಾರಣೆ ವೇಳೆ ನಟಿ ನಮ್ರತಾ ಶಿರೋಡ್ಕರ್ ಹೆಸರು ಕೂಡ ಬಂದಿದ್ದು, ಅವರ ಚಾಟ್‌ಗಳ ಮಾಹಿತಿ ಪಡೆಯಲಾಗಿದೆ ಎನ್ನಲಾಗಿದೆ.
ವಿಚಾರಣೆ ವೇಳೆ ಡ್ರಗ್ ಪೆಡ್ಲರ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸಿಬಿಡಿ ತೈಲ ಕೂಡ ಭಾರತದಲ್ಲಿ ಬ್ಯಾನ್ ಆಗಿದ್ದು, ಇದನ್ನು ಬಳಸಿದ್ದಾರೆ ಎನ್ನಲಾಗಿದೆ.
ಸುಶಾಂತ್ ಸಾವಿನ ನಂತರ ಮಾದಕವಸ್ತು ಸಂಬಂಧಿತ ತನಿಖೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಇದರಲ್ಲಿ ಅನೇಕ ಬಾಲಿವುಡ್ ಮಂದಿಯ ಹೆಸರು ಬಂದಿದ್ದು, ತನಿಖೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್‌ನ ಬಹಳಷ್ಟು ಮಂದಿ ಹೆಸರು ಹೊರ ಬಂದಿದ್ದು, ಸಾರಾ ಅಲಿ ಖಾನ್, ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಹೆಸರು ಕೂಡ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss