Wednesday, June 29, 2022

Latest Posts

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾಗೆ ‘NCB’ ಸಮನ್ಸ್

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕ ಕರಿಷ್ಮಾ ಪ್ರಕಾಶ್ ಅವರನ್ನು ಎನ್ ಸಿ ಬಿ (ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ) ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಕರಿಷ್ಮಾ ನಾಪತ್ತೆಯಾಗಿರುವ ಕಾರಣ ಅವರ ಮುಂಬೈನ ಮನೆ ಬಾಗಿಲಿಗೆ ನೋಟೀಸ್ ಹಚ್ಚಲಾಗಿದೆ.
ಮಂಗಳವಾರ ದೀಪಿಕಾ ಅವರ ಮ್ಯಾನೇಜರ್ ಕರಿಷ್ಮಾ ಅವರ ಮುಂಬೈ ಮನೆಯಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬೆನ್ನಲ್ಲೇ ಎನ್.ಸಿ.ಬಿ. ಸಮನ್ಸ್ ಕೊಟ್ಟಿದೆ.
ಕಳೆದ ತಿಂಗಳೂ ಸಹ ಕರಿಷ್ಮಾ ಪ್ರಕಾಶ್ ಅವರನ್ನು ಬಾಲಿವುಡ್‌ನಲ್ಲಿ ನಿಷೇಧಿತ ವಸ್ತುಗಳ ಮಾರಾಟ ಮತ್ತು ಬಳಕೆಯ ಬಗ್ಗೆ ತನಿಖೆ ನಡೆಸುತ್ತಿರುವ ಎನ್.ಸಿ.ಬಿ. ಪ್ರಶ್ನಿಸಿತ್ತು.ಟಿಯರಾದ ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಅವರನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದ ವ್ಯಾಪಕವಾದ ಡ್ರಗ್ಸ್ ಔಷಧ ತನಿಖೆಯಲ್ಲಿ ಎನ್‌ಸಿಬಿ ಕರೆಸಿಕೊಂಡಿದ್ದು, ಕೆಲವು ದೋಷಾರೋಪಣೆ ಮಾಡಿದ ವಾಟ್ಸಾಪ್ ಚಾಟ್‌ಗಳು ಪತ್ತೆಯಾದ ನಂತರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss