Sunday, June 26, 2022

Latest Posts

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಪುತ್ರಿ ಬಣ್ಣದ ಲೋಕಕ್ಕೆ ಎಂಟ್ರಿ

ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಪುತ್ರಿ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಸುಶ್ಮಿತಾ ಸೇನ್ ಅವರ ವರ್ಷದ ಪುತ್ರಿ ರೇನೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು, ’ಸುಟ್ಟೇಬಾಜ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ.

ಸುಶ್ಮಿತಾ ಸೇನ್ ಅವರೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದಂತೆ, ರೇನೆ ಗೆ ನಟನೆ ಬಹಳ ಇಷ್ಟವಂತೆ, ಆದರೆ ಸುಶ್ಮಿತಾ ಅವರೇ ಅವರನ್ನು ತಡೆಯುತ್ತಿದ್ದರಂತೆ. ಆದರೆ ಈಗ ತಾಯಿಯ ಒಪ್ಪಿಗೆ ಪಡೆದು ಸಿನಿಮಾದಲ್ಲಿ ನಟನೆ ಆರಂಭಿಸಿದ್ದಾರೆ ರೇನೆ.

ಹೊಸ ನಿರ್ದೇಶಕ ಕಬೀರ್ ಖುರಾನಾ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಸಿನಿಮಾ ಆಗಿದೆ. ಸಿನಿಮಾದ ಶೂಟಿಂಗ್ನ ಕೆಲವು ಚಿತ್ರಗಳನ್ನು ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

ಸುಶ್ಮಿತಾ ಸೇನ್, ರೇನೆಯನ್ನು ೨೦೦೦ ನೇ ಇಸವಿಯಲ್ಲಿ ದತ್ತು ಪಡೆದರು. ರೇನೆ ಬಿಟ್ಟು ಅಲಿಶಾ ಎಂಬ ಇನ್ನೊಬ್ಬ ಮಗಳನ್ನು ಸಹ ಸುಶ್ಮಿತಾ ಸೇನ್ ದತ್ತು ಪಡೆದಿದ್ದಾರೆ. ಇನ್ನೂ ಮದುವೆ ಆಗಿರದ ಸುಶ್ಮಿತಾ, ರೋಮನ್ ಶಾವಲ್ ಎಂಬುವರೊಡನೆ ಲಿವ್ ಇನ್ ರಿಲೇಶನ್ನಲ್ಲಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss