ಬಾಲಿವುಡ್ ನಟ ಸಂಜಯ್ ದತ್ ಉಸಿರಾಟ ತೊಂದರೆಯಿಂದ ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಭಾನುವಾರ ಮತ್ತು ಸೋಮವಾರ ಮಧ್ಯಹ್ನವರೆಗೂ ಚಿಕಿತ್ಸೆ ಪಡೆದ ನಟನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಆಗಸ್ಟ್ ೮ ರಂದು ರಾತ್ರಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ದತ್ ಅವರನ್ನು ದಾಖಲಿಸಲಾಗಿತ್ತು. ’ಕೆಲವು ದಿನಗಳ ಕಾಲ ಸಂಜಯ್ ದತ್ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ. ಎಲ್ಲಾ ಅವಶ್ಯಕತ ಪರೀಕ್ಷೆಗಳಿಗೂ ಅವರು ಒಳಗಾಗಲಿದ್ದಾರೆ. ಪ್ರಸ್ತುತ ಕೊರೊನಾ ವರದಿ ನೆಗೆಟಿವ್ ಬಂದಿದೆ’ ಎಂದು ದತ್ ಸಹೋದರಿ ಮಾಹಿತಿ ನೀಡಿದ್ದರು. ಉಸಿರಾಟ ತೊಂದೆರೆ ಉಂಟಾದ ಹಿನ್ನೆಲೆ ಕೊರೊನಾ ವೈರಸ್ ತಗುಲಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಹಾಗಾಗಿ, ಪರೀಕ್ಷೆ ಸಹ ನಡೆಸಲಾಗಿದೆ. ವರದಿಯಲ್ಲಿ ಕೊವಿಡ್ ನೆಗಿಟಿವ್ ಬಂದಿದೆ ಎಂದು ತಿಳಿದಿದೆ. ಸಂಜಯ್ ದತ್ ಮನೆಗೆ ತಲುಪಿದರು ಎಂಬ ವಿಚಾರ ತಿಳಿಯುತ್ತಿದ್ದಂತೆ ಕೆಲವು ಅಭಿಮಾನಿಗಳು ಅವರನ್ನು ನೋಡಲು ಮನೆ ಬಳಿ ಜಮಾಯಿಸಿದ್ದರು. ಮನೆಯಿಂದ ಹೊರಗೆ ಬಂದಿದ್ದ ದತ್ ಅಭಿಮಾನಿಗಳ ಕೈ ಸನ್ನೆ ಮಾಡಿ ‘ನ್ಯವಾದ ತಿಳಿಸಿದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ನಟ ಸಂಜಯ್ ದತ್ ಮೊದಲ ಸಲ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಯಶ್ ಅಭಿನಯದ ಕೆಜಿಎ್ ೨ ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.