Sunday, August 14, 2022

Latest Posts

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು CBIಗೆ ನೀಡಿ: ಮಾಯಾವತಿ

ಲಖನೌ: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಸಾವಿನ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐ ತನಿಖೆ ಮಾಡಬೇಕು ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರು.

ಸುಶಾಂತ್ ಅವರ ಸಾವಿನ ಪ್ರಕರಣ ಪ್ರತಿದಿನ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಟ್ನಾದ ಪೊಲೀಸರಿಗೆ ಸುಶಾಂತ್ ಅವರ ತಂದೆ ಎಫ್ ಐ ಆರ್ ದಾಖಲಿಸಿದ್ದಾರೆ. ಆದರಿಂದ ಈ ಸಾವಿನ ಪ್ರಕರಣವನ್ನು ಸಿಬಿಐಗೆ ನೀಡುವುದೇ ಉತ್ತಮ ಎಂದು ಟ್ವೀಟ್ ಮಾಡಿದ್ದಾರೆ.

ಮಾಯಾವತಿ ಅವರು ಕಾಂಗ್ರೆಸ್ ಮೇಲೆ ಕಿಡಿಕಾರಿದ್ದು, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಸುಶಾಂತ್ ಅವರ ಸಾವಿನ ಕುರಿತು  ಕಾಂಗ್ರೆಸ್ ನಾಯಕರು ರಾಜಕೀಯ ಮಾಡುತ್ತಿದ್ದಾರೆ ಇದು ಸೂಕ್ತವಲ್ಲ ಎಂದರು.

ಜೂನ್ 14 ರಂದು ಸುಶಾಂತ್ ಸಿಂಗ್ ಅವರು ಮೃತಪಟ್ಟಿದ್ದು, ಇತ್ತೀಚೆಗಷ್ಟೆ ಅವರ ತಂದೆ ಬಾಲಿವುಡ್ ನಟಿ ರಿಯಾ ಚಕ್ರಬೋರ್ತಿ ವಿರುದ್ಧ ಬಿಹಾರದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

ಮಹಾರಾಷ್ಟ್ರಾ ಪೊಲೀಸರು ಸಿನಿಮಾ ನಿರ್ದೇಶಕ ಮಹೇಶ್ ಭಟ್, ಚಲನಚಿತ್ರ ವಿಮರ್ಶಕ ರಾಜೀವ್ ಮಸಂಡ್, ನಿರ್ದೇಶಕ- ನಿರ್ಮಾಪಕ ಸಂಜಯ್ ಲೀಲಾ ಭಂಸಾಲಿ ಮತ್ತು ಆಧಿತ್ಯ ಚೋಪ್ರ ಸೇರಿದಂತೆ 41 ಮಂದಿ ಹೇಳಿಕೆಯನ್ನು ಪಡೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss