Monday, August 15, 2022

Latest Posts

ಬಾಲಿವುಡ್ ನಲ್ಲಿ ಡ್ರಗ್ಸ್‌ ಜಾಲ: ನಟಿ ದೀಪಿಕಾ ಪಡುಕೋಣೆ ವಿರುದ್ಧ ಬಿಹಾರದಲ್ಲಿ ಎಫ್‌ಐಆರ್‌ ದಾಖಲು

ಪಾಟ್ನಾ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಆತ್ಮಹತ್ಯೆ ಪ್ರಕರಣದಲ್ಲಿ ಜೊತೆಗೆ ಡ್ರಗ್ಸ್‌ ಜಾಲದ ಆರೋಪದಲ್ಲಿ ಸಿಲುಕಿಕೊಡಿರುವ ಬಾಲಿವುಡ್‌ ತಾರೆಯರಿಗೆ ಎನ್ ಸಿಬಿ ಯಿಂದ ಕಂಟಕವಾಗುವ ಸಾಧ್ಯತೆ ಇದೆ.
ಇನ್ನು ಬಿಹಾರದ ಮುಜಾಫರ್‌ಪುರ್‌ ಸಿವಿಲ್‌ ಕೋರ್ಟ್‌ನಲ್ಲಿ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
ನಿನ್ನೆಯಷ್ಟೇ ಮಾದಕ ವಸ್ತುಗಳ ನಿಯಂತ್ರಣ ದಳ (ಎನ್‌ಸಿಬಿ) ದೀಪಿಕಾ ಮ್ಯಾನೇಜರ್‌ ಕರೀಶ್ಮಾ ಪ್ರಕಾಶ್‌ ಮತ್ತು ಕ್ವಾನ್‌ ಟ್ಯಾಲೆಂಟ್‌ ಮ್ಯಾನೇಜ್ಮೆಂಟ್‌ ಏಜೆನ್ಸಿಯ ಸಿಇಒ ಧ್ರುವ ಚಿಟ್ಗೋಪೆಕರ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡಿತ್ತು.
ಈಗಾಗಲೇ ಬಂಧನವಾಗಿರುವ ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ವಿಚಾರಣೆ ಮುಂದುವರಿಸಿದ ಎನ್ ಸಿಬಿ ಅಗತ್ಯ ಬಿದ್ದರೆ ದೀಪಿಕಾ ಪಡುಕೋಣೆಗೂ ಸಮನ್ಸ್‌ ನೀಡುವುದಾಗಿ ತಿಳಿಸಿವೆ.
ವಾಟ್ಸ್‌ಆ್ಯಪ್‌ ಸಂಭಾಷಣೆಯಲ್ಲಿ ದೀಪಿಕಾ ಏಜೆನ್ಸಿಯೊಂದಿಗೆ ಡ್ರಗ್ಸ್‌ ಬಗ್ಗೆ ಚರ್ಚೆ ಮಾಡಿರುವ ಆರೋಪ ಕೇಳಿ ಬಂದಿದೆ. ಎನ್ ಸಿಬಿಯಿಂದ ಮತ್ತಷ್ಟು ತನಿಖೆ ಚುರುಕುಗೊಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss