Wednesday, July 6, 2022

Latest Posts

ಬಾಲಿವುಡ್ ನ ಹಿರಿಯ ನಟಿ ನಿಮ್ಮಿ ನಿಧನ: ಮುಂಬೈನಲ್ಲಿ ಅಂತ್ಯ ಸಂಸ್ಕಾರ

ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ಹಿರಿಯ ನಟಿ ನಿಮ್ಮಿ(88) ಬುಧವಾರ ನಿಧನರಾಗಿದ್ದಾರೆ.

ಉಸಿರಾಟದ ತೊಂದರೆಯಿಂದ ಅವರರನ್ನು ಜುಹೂ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಮ್ಮಿ ಅವರು ಮೃತಪಟ್ಟಿದ್ದಾರೆ. ಎಂದು ಪಿಟಿಐ ವರದಿ ಮಾಡಿದೆ. ಇಂದು(ಗುರುವಾರ) ಮಧ್ಯಾಹ್ನ ಮುಂಬೈನ ರೇಯಾ ರಸ್ತೆಯಲ್ಲಿರುವ ಶವಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ತಿಳಿಸಿದೆ.

1933 ಫೆ.18 ರಲ್ಲಿ ಜನಿಸಿದ ನಿಮ್ಮಿ. 1950 ರಿಂದ 1960ರವರಗೂ ಸ್ಟಾರ್ ನಟಿಯಾಗಿ ಖ್ಯಾತಿ ಹೊಂದಿದ್ದರು. ನಿಮಿ ಅವರ ಮೊದಲ ಚಿತ್ರ ನಿಮ್ಮಿ ಅಂದಾಜ್. ಬಳಿಕ ಹಿಂದಿ ಚಿತ್ರರಂಗದಲ್ಲಿ ಆಯಾನ್, ಬರಾಸನ್ ಹಾಗೂ ದೀದಾರ್ ಚಿತ್ರಗಳಿಂದ ಜನರ ಮನಗೆದ್ದವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss