ಬಾಲಿವುಡ್ ಮಂದಿಗೂ ಕೊರೋನಾ ಆತಂಕ ಶುರುವಾಗಿದೆ. ನಟ ಆಮಿರ್ ಖಾನ್ , ನಿರ್ದೇಶಕ ಕರಣ್ ಜೋಹರ್, ನಟಿ ಜಾಹ್ನವಿ ಕಪೂರ್ ಅವರ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇದೀಗ ಹಿರಿಯ ಕಲಾವಿದೆ ರೇಖಾ ಅವರಿಗೂ ಕೊರೋನಾದ ಭೀತಿ ಎದುರಾಗಿದೆ. ರೇಖಾ ಅವರ ಮನೆಯ ಭದ್ರತಾ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಹೀಗಾಗಿ ರೇಖಾ ಅವರ ಮನೆಯನ್ನ ಸೀಲ್ಡೌನ್ ಮಾಡಲಾಗಿದೆ. ಮುಂಬೈನ ಬಾಂದ್ರಾದ ಬ್ಯಾಂಡ್ಸ್ಟಾಂಡ್ ಏರಿಯಾದಲ್ಲಿ ರೇಖಾ ಅವರ ಬಂಗಲೇ ಇದೆ. ಮನೆ ಕಾಯಲು ಇಬ್ಬರು ಭದ್ರತಾ ಸಿಬ್ಬಂದಿ ಇದ್ದು, ಇವರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ತಗುಲಿ ಆಸ್ಪತ್ರೆಗೆ ಸೇರಿದ್ದಾರೆ.