Saturday, August 13, 2022

Latest Posts

ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ, ಮತ್ತೊಂದು ರಹಸ್ಯ ಸುದ್ದಿ ಬಯಲು, ಇನ್ನೊಂದು ಮೊಬೈಲ್ ಫೋನ್ ಬಳಸುತ್ತಿದ್ದ ರಿಯಾ ಚಕ್ರವರ್ತಿ

ಬಾಲಿವುಡ್  ನಟ  ಸುಶಾಂತ್  ಸಿಂಗ್  ರಜಪೂತ್  ಸಾವಿನ  ಪ್ರಕರಣ  ದಿನದಿಂದ  ದಿನಕ್ಕೆ  ಹೊಸ  ಟ್ವಿಸ್ಟ್  ಸಿಗುತ್ತಿದೆ.  ಎಲ್ಲರನ್ನು  ಅಗಲಿ  ಎರಡು  ತಿಂಗಳು  ಕಳೆಯುತ್ತ  ಬಂದಿದೆ.  ಈಗಾಗಲೇ  ಕೇಸ್  ಮುಂಬೈ  ಮತ್ತು  ಬಿಹಾರ  ಪೊಲೀಸರ  ನಂತರ  ಈಗ  ಸಿಬಿಐ  ಅವರ  ವಶದಲ್ಲಿದೆ. ಸುಶಾಂತ್ ಜೊತೆಗೆ ದೂರವಾಣಿ ಮೂಲಕ ಸಂಪರ್ಕದಲ್ಲಿ ಇದ್ದ ಬಹುತೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ನಡುವೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ಕಣ್ಣಾಮುಚ್ಚಾಲೆ ಆಡುತ್ತಿರುವುದು ಗಮನಕ್ಕೆ ಬರುತ್ತಿದೆ.

ರಿಯಾ ಚಕ್ರವರ್ತಿ ಮತ್ತು ಸುಶಾಂತ್ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು ಎಂಬುದಕ್ಕೆ ಅವರ ಬ್ಯಾಂಕ್ ಖಾತೆ ವಿವರಗಳೇ ಸಾಕ್ಷಿ ಒದಗಿಸುತ್ತಿವೆ. ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅದಕ್ಕಾಗಿ ಶುಕ್ರವಾರ ಇಡಿ ಅಧಿಕಾರಗಳ ಮುಂದೆ ಹಾಜರಾಗಿದ್ದರು. ಹಾಗಂತ ಅವರು ಎಲ್ಲವನ್ನೂ ಬಾಯಿ ಬಿಟ್ಟಿಲ್ಲ. ತನಿಖೆ ವೇಳೆ ಮುಖ್ಯವಾದ ಸತ್ಯವನ್ನೇ ರಿಯಾ ಮುಚ್ಚಿಟ್ಟಿದ್ದಾರೆ ಎಂಬುದು ಈಗ ಬಹಿರಂಗ ಆಗಿದೆ! ಈಗಾಗಲೇ ರಿಯಾ ಅವರ ಕಾಲ್ ರೆಕಾರ್ಡ್ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು. ಅಚ್ಚರಿ ವಿಚಾರ ಏನೆಂದರೆ ರಿಯಾ ಅವರು ರಹಸ್ಯವಾಗಿ ಮತ್ತೊಂದು ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದರು ಎಂಬ ಸತ್ಯ ಹೊರಬಿದ್ದಿದೆ. ಇಡಿ ಅಧಿಕಾರಿಗಳ ತನಿಖೆ ವೇಳೆ ಈ ರಹಸ್ಯ ಬಹಿರಂಗ ಆಗಿದೆ. ಆ ೨ನೇ ಮೊಬೈಲ್ ಫೋನ್  ಅನ್ನೂ ಕೂಡ ಅಧಿಕಾರಿಗಳಿಗೆ ಒಪ್ಪಿಸುವಂತೆ ಸೂಚಿಸಲಾಗಿದೆ. ಆ ಫೋನ್ ಮೂಲಕ ನಡೆದಿರಬಹುದಾದ ಮಾತುಕತೆ ಮತ್ತು ಮೆಸೇಜ್ಗಳ ಜನ್ಮ ಜಾಲಾಡಿದರೆ ಇನ್ನೂ ಕೆಲವು ಸತ್ಯಗಳು ಹೊರಬರುವುದು ಗ್ಯಾರಂಟಿ. ಇಡಿ ಅಧಿಕಾರಿಗಳ ತನಿಖೆಗೆ ರಿಯಾ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಮಾಹಿತಿ ಕೂಡ ಕೇಳಿಬಂದಿದೆ. ರಿಯಾ ಮಾತ್ರವಲ್ಲದೆ ಅವರ ಸಹೋದರ ಶೋವಿಕ್ ಅವರನ್ನೂ ತನಿಖೆಗೆ ಒಳಪಡಿಸಲಾಗಿದೆ. ರಿಯಾ ರಹಸ್ಯವಾಗಿ ಬಳಸುತ್ತಿದ್ದ ಎರಡನೇ ಮೊಬೈಲ್ ಮಾತ್ರವಲ್ಲದೆ, ಅವರ ಲ್ಯಾಪ್‌ಟಾಪ್ ಮುಂತಾದ

ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದಾರೆ. ಇದು  ಕೂಡ  ಇಂದು ಸೋಮವಾರ ಕೂಡ ವಿಚಾರಣೆ ಮುಂದುವರಿಯಲಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss