ಹೊಸದಿಗಂತ ಆನ್ ಲೈನ್ ಡೆಸ್ಕ್:
ನನ್ನ ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕಥೆಗಳನ್ನು ಕೇಳುತ್ತಿದ್ದೆ ಎಂದು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಕೃತಿಯಲ್ಲಿ ಹೇಳಿಕೊಂಡಿದ್ದಾರೆ.
ಭಾರತದಲ್ಲಿ 2 ಸಾವಿರ ವಿಭಿನ್ನ ಜನಾಂಗೀಯ ಗುಂಪುಗಳು, 700ಕ್ಕೂ ಹೆಚ್ಚು ಭಾಷೆಗಳನ್ನು ಭಾರತದಲ್ಲಿರುವವರು ಮಾತನಾಡುತ್ತಾರೆ. ನಾನು ಇಂಡೋನೇಷ್ಯಾದಲ್ಲಿದ್ದಾಗ ಹಿಂದೂಗಳ ಪವಿತ್ರ ಗ್ರಂಥಗಳನ್ನು ಕೇಳುತ್ತಿದ್ದೆ ಎಂದು ಆತ್ಮ ಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ನಾನು ರಾಮಾಯಣ, ಮಹಾಭಾರತ ಕೇಳುತ್ತಿದ್ದರಿಂದ ಕಾಲೇಜಿನ ಸ್ನೇಹಿತರು ದಾಲ್ ಹಾಗೂ ಕೀಮಾ ತಯಾರಿಕೆ ಕಲಿಕೆಯ ಜೊತೆಗೆ ಭಾರತದ ಕುರಿತಾಗಿಯೂ ಪ್ರೀತಿ ಹೆಚ್ಚಾಯಿತು ಎಂದು ತಮ್ಮ ಕೃತಿಯಲ್ಲಿ ಬರೆದುಕೊಂದ್ದಾರೆ.
ಇತ್ತೀಚೆಗಷ್ಟೆ ಈ ಪುಸ್ತಕ ಬಿಡುಗಡೆ ಮಾಡಿದ ಅವರು 2010ರಲ್ಲಿ ಅಧ್ಯಕ್ಷರಾಗುವ ಮುಂಚೆ ಭಾರತಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಭಾರತದ ಕುರಿತು ಯಾವಾಗಲೂ ವಿಶೇಷ ಸ್ಥಾನವನ್ನು ಪಡೆದಿತ್ತು ಎಂದು ಹೇಳಿದ್ದಾರೆ.