ಬಾಳೆಕಾಯಿ ಹಳ್ಳಿ ಮನೆಗಳಲ್ಲಿ ಸಾಮಾನ್ಯವಾಗಿ ಇರುವಂತಹ ತರಕಾರಿ. ಬಾಳೆಕಾಯಿಂದ ಬಹಳಷ್ಟು ಅಡುಗೆಗಳನ್ನು ಮಾಡಬಹುದು. ಅದರಲ್ಲಿ ಬಾಳೆಕಾಯಿ ಹುಡಿಪಲ್ಯ ಬಹಳ ರುಚಿ ಕೊಡುವಂತಹ ಅಡುಗೆ. ಈ ಪಲ್ಯ ದೋಸೆ, ಚಪಾತಿ, ಅನ್ನದ ಜೊತೆ ತಿನ್ನಬಹುದು. ಹಾಗೆ ಕೂಡ ತಿನ್ನಬಹದು. ಹೇಗೆ ಮಾಡುವುದು ಎಂಬುದು ಇಲ್ಲಿದೆ ನೋಡಿ.
ಬೇಕಾಗುವ ಸಾಮಗ್ರಿ:
ಎರಡು ಬಾಳೆಕಾಯಿ
ಈರುಳ್ಳಿ
ಹಸಿಮೆಣಸು
ಲಿಂಬು
ಉಪ್ಪು
ಅರಿಶಿಣ
ಸಕ್ಕರೆ
ಸಾಸಿವೆ
ಕರಿಬೇವು
ಇಂಗು
ಎಣ್ಣೆ
ಮಾಡುವ ವಿಧಾನ:
ಮೊದಲಿಗೆ ಎರಡು ಸ್ವಲ್ಪ ದೊಡ್ಡ ಗಾತ್ರದ ಬಾಳೆಕಾಯಿಯನ್ನು ಬೇಯಿಸಿಕೊಳ್ಳಬೇಕು. ಬಾಳೆಕಾಯಿ ಕಪ್ಪಗಾಗಬಾರದೆಂದರೆ ಹುಳಿ ಹಾಕಿ ಬೇಯಿಸಿಕೊಳ್ಳಿ.
ಬೇಯಿಸಿಕೊಂಡ ಬಾಳೆಕಾಯಿಯನ್ನು ತುರಿದುಕೊಳ್ಳಿ.
ಆನಂತರ ಎಣ್ಣೆ, ಅರಿಶಿಣ, ಸಾಸಿವೆ, ಹಸಿಮೆಣಸು, ಕರಿಬೇವು, ಇಂಗು, ಈರುಳ್ಳಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಒಗ್ಗರಣೆಗೆ ತುರಿದುಕೊಂಡ ಬಾಳೆಕಾಯಿಯನ್ನು ಹಾಕಿ ಫ್ರೈ ಮಾಡಿ. ಫ್ರೈ ಮಾಡುವಾಗ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ, ಲಿಂಬು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ಬಾಳೆಕಾಯಿ ಹುಡಿ ಪಲ್ಯಾ ರೆಡಿ.