Wednesday, June 29, 2022

Latest Posts

ಬಾಳೆ ದಿಂಡಿನ ಹುಳಿಲು: ಸರಳ ಅಡುಗೆ ಬಹಳ ರುಚಿ 

ಬಾಳೆ ಗಿಡದಿಂದ ಸಿಗುವ ಪ್ರತಿಯೊಂದು ಅಡುಗೆಗೆ ಬರುವಂತಹದೆ. ಬಾಳೆಕಾಯಿ ಪಲ್ಯ, ಚಿಪ್ಸ್, ಸಾಂಬಾರು, ಬಾಳೆ ಹೂವಿನದೂ ಪಲ್ಯಕ್ಕೆ ಬರುತ್ತದೆ. ಬಾಳೆ ದಿಂಡಿನದು ಅಡುಗೆಗೆ ಬರುವುದು ಕಡಿಮೆ. ಅದರಿಂದ ಹುಳಿಲು ಮಾಡುತ್ತಾರೆ. ಬಾಳೆ ದಿಂಡಿನ ಹುಳಿಲು ಮಾಡುವುದು ಬಹಳ ಸುಲಭ. ಇದನ್ನು ತಿನ್ನುವುದಕ್ಕೆ ಬಹಳ ರುಚಿಯಾಗಿರುತ್ತದೆ.  ಮಾಡುವುದು ಹೇಗೆ? ಏನು ಬೇಕು ಇಲ್ಲಿದೆ ಮಾಹಿತಿ.

ಬೇಕಾಗುವ ಸಾಮಗ್ರಿ:

ಬಾಳೆ ದಿಂಡು
ಮೊಸರು
ಉಪ್ಪು
ಸೂಜು ಮೆಣಸು( ಹಸಿ ಮೆಣಸು)
ಶುಂಠಿ

ಮಾಡುವ ವಿಧಾನ:
ಬಾಳೆ ಮರದ ಒಂದೊಂದೆ ಪದರನ್ನು ಬಿಡಿಸಿದರೆ ಒಳಗೆ ದೊಡ್ಡ  ದೊಣ್ಣೆಯ ಆಕಾರದಲ್ಲಿ ಇರುವುದೇ ಬಾಳೆ ದಿಂಡು. ಆ ದಿಂಡನ್ನು ತೆಗೆದುಕೊಂಡು ಅದನ್ನು ಎರಡು ಮುಷ್ಟಿಯಾಗುವಷ್ಟು ಚಿಕ್ಕದಾಗಿ ಹೆಚ್ಚ ಬೇಕು. ಹೆಚ್ಚಿದ ತಕ್ಷಣ ಅದನ್ನು ಕೈ ಯಿಂದ ತಿಕ್ಕಬೇಕು. ಕೈ ಯಿಂದ ತಿಕ್ಕಿದರೆ ಅದರ ಮೇಣ ಹೋಗುತ್ತದೆ.
ಹೆಚ್ಚಿಕೊಂಡಿರುವುದಕ್ಕೆ ಒಂದು ಕಪ್ ಮೊಸರನ್ನು ಹಾಕಿ ಮಿಕ್ಸ್ ಮಾಡಬೇಕು.
ಆ ನಂತರ ಅದಕ್ಕೆ ಉಪ್ಪು, ಜಜ್ಜಿದ ಶುಂಠಿ ತುಂಡು, ಸೂಜು ಮೆಣಸು ಹಾಕಿದರೆ ಹುಳಿಲು ರೆಡಿ. ಇದನ್ನು ಊಟದ ಜೊತೆ ತಿನ್ನಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss