Sunday, June 26, 2022

Latest Posts

ಬಾವಿಗೆ ಹಾರಿದ್ದ ವೃದ್ಧೆಯನ್ನು ಅಪಾಯ ಲೆಕ್ಕಿಸದೆ ಮೇಲಕ್ಕೆತ್ತಿದರು ಈ ಆ‘ರಕ್ಷಕ’!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಬಾವಿಗೆ ಹಾರಿದ್ದ 70 ವರ್ಷದ ವೃದ್ಧೆಯನ್ನು ಜೀವದ ಹಂಗುತೊರೆದು ಇಲ್ಲೊಬ್ಬರು ಆ‘ರಕ್ಷಕ’ ಮೇಲಕ್ಕೆತ್ತಿದ್ದಾರೆ. ಈ ಘಟನೆ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿಯ ಈ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಘಟನೆ ನಡೆದದ್ದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡೂರ್ ಗ್ರಾಮದಲ್ಲಿ. ರಾತ್ರಿ 11.50ರ ಸುಮಾರಿಗೆ ಪೊಲೀಸ್ ಸಿಬ್ಬಂದಿಗಳಾದ ಎ. ಶಿವಕುಮಾರ್ ಮತ್ತು ಶ್ಯಾಮ್ ಎಂದಿನಂತೆ ತಮ್ಮ ಬೀಟ್ ಕರ್ತವ್ಯದಲ್ಲಿದ್ದರು. ಈ ವೇಳೆ 70 ವರ್ಷದ ಮಹಿಳೆ ಬಾವಿಗೆ ಬಿದ್ದಿರುವುದಾಗಿ ಸಹಾಯವಾಣಿ 100 ರ ಮೂಲಕ ಅವರಿಗೆ ಮಾಹಿತಿ ಬಂದಿದೆ. ಘಟನಾ ಸ್ಥಳ ಅವರಿದ್ದ ಜಾಗದಿಂದ ಒಂದು ಕಿಲೋಮೀಟರ್ ದೂರದಲ್ಲಿತ್ತು.

ಧಾವಿಸಿ ತೆರಳುವ ಹೊತ್ತಿಗೆ ಮನೆ ಬಳಿ ಇದ್ದ ಬಾವಿಯಲ್ಲಿ ವೃದ್ಧೆ ಜೀವನ್ಮರಣ ಹೋರಾಟ ನಡೆಸುತ್ತಿದ್ದುದು ಕಂಡುಬಂತು. ಮಾಹಿತಿ ಇದ್ದರೂ ಸ್ಥಳೀಯರು ಯಾರೂ ಮಹಿಳೆಯ ರಕ್ಷಣೆಗೆ ಬಂದಿರಲಿಲ್ಲ. ಜೊತೆಗೆ ಸುತ್ತಲೂ ಕತ್ತಲು ಬೇರೆ. ಹೀಗಿದ್ದರೂ ಬಾವಿಯ ಸುತ್ತ ಯಾವುದೇ ಏಣಿ, ಹಗ್ಗವಿಲ್ಲದಿದ್ದರೂ ಪೇದೆ ಶಿವ ಕುಮಾರ್ ಧೈರ್ಯಮಾಡಿ ಬಾವಿಗೆ ಹಾರಿ, ಮುಳುಗುತ್ತಿದ್ದ ವೃದ್ಧೆಯನ್ನು ರಕ್ಷಿಸಿದ್ದಾರೆ.
ರಕ್ಷಣೆಗೊಳಗಾದ ವೃದ್ಧೆಯನ್ನು ಬಿ ಸಾವಿತ್ರಿ ಎಂದು ಗುರುತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss