spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಿಎಸ್‌ಎನ್‌ಎಲ್ ಪುನರುಜ್ಜೀವನಕ್ಕೆ ಪ್ರಧಾನಿಗಳಿಂದ ವಿನೂತನ ಯೋಜನೆ: ನಳಿನ್‌ ಕುಮಾರ್ ಕಟೀಲ್

- Advertisement -Nitte

ಸುಬ್ರಹ್ಮಣ್ಯ: ಬಿಎಸ್‌ಎನ್‌ಎಲ್ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಧಾನಿಗಳು ಸಂಸ್ಥೆಗೆ ಪುನರುಜ್ಜೀವನ ನೀಡಿ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿಗಳು ವಿನೂತನಯೋಜನೆ ಸಿದ್ಧಪಡಿಸಿದ್ದಾರೆ ಎಂದು ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಹೇಳಿದರು.
ತಮ್ಮ ಆದರ್ಶ ಗ್ರಾಮ ಬಳ್ಪಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಧಾನಿಗಳ ಮಹತ್ವಾಕಾಂಕ್ಷಿಯ ಆದರ್ಶ ಗ್ರಾಮ ಬಳ್ಪದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇಲ್ಲಿನ ಬೋಗಾಯನ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ. ಬಳ್ಪ ಹೈಸ್ಕೂಲ್ ಸಭಾಂಗಣ ಕಾಮಗಾರಿ ನಡೆಯುತ್ತಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಬಳ್ಪದ ಸಮಗ್ರ ರಸ್ತೆಗಳ ಅಭಿವೃದ್ಧಿಯು ರೂ. 9 ಕೋಟಿ ಅನುದಾನದಲ್ಲಿ ನಡೆಯಲಿದೆ. 7 ಜನರಿಗೆ ಎನ್‌ಜಿಒ ಸಂಸ್ಥೆಗಳ ಮೂಲಕ ಮನೆ ನಿರ್ಮಾಣ ಕಾರ್ಯದ ಸಿದ್ಧತೆ ನಡೆಯುತ್ತಿದೆ. ಧ್ಯಾನ ಮಂದಿರ, ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆದರ್ಶ ಗ್ರಾಮ ಯೋಜನೆಯ ಮಾಹಿತಿ ನೀಡಿದರು.
ಶಾಸಕ ಅಂಗಾರ ಅವರಿಗೆ ಸಚಿವಸ್ಥಾನ ನೀಡಲು ನಮ್ಮ ಅಭಿಪ್ರಾಯವಿದ್ದು, ಸರಕಾರ, ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕಿದೆ ಎಂದರು. ಈಗಾಗಲೇ ಬಿಜೆಪಿ ಸಮಿತಿ, ಅಭ್ಯಸವರ್ಗ ಮಾಡಲಾಗುತ್ತಿದ್ದು, ಮುಂದಿನ ಚುನಾವಣೆಯನ್ನು ಸಂಘಟನೆ ಆಧಾರದಲ್ಲಿ ಎದುರಿಸಿ, ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಬೆಂಗಳೂರಿನಲ್ಲಿ ನಡೆದದ್ದು ಪೂರ್ವಯೋಜಿತ ಕೃತ್ಯ. ತನ್ನ ಪಕ್ಷದ ಶಾಸಕರ ಮನೆಗೆ ದಾಳಿ ನಡೆಸಿದವರು ಬೆಂಕಿ ಹಾಕಿದಾಗ ಕಾಂಗ್ರೆಸ್ ತನ್ನ ಮತಬ್ಯಾಂಕ್‌ಗೋಸ್ಕರ ಮೌನವನ್ನು ವಹಿಸಿದೆ. ಬಿಜೆಪಿ ಸರಕಾರ ದಿಟ್ಟತನದಿಂದ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಿದೆ. ದಾಂದಲೆ ಎಬ್ಬಿಸಿದವರ ಆಸ್ತಿ, ಪಾಸ್ತಿ ಮುಟ್ಟುಗೋಲು ಹಾಕುವುದು ಮತ್ತು ಅವರ ಸರಕಾರಿ ಸೌಲತ್ತುಗಳನ್ನು ಹಿಂಪಡೆಯುವಂತೆ ನಾನು ಸರಕಾರಕ್ಕೆ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಓಲೈಕೆ ರಾಜಕರಣದಿಂದ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಟೀಲ್ ಆರೋಪಿಸಿದರು.
ಶಾಸಕ ಎಸ್.ಅಂಗಾರ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಸಹಿತ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಜತೆಗಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss