ಬಿಕ್ಕಳಿಕೆ ಯಾಕೆ ಬರುತ್ತದೆ? ಅಮ್ಮ ಹೇಳ್ತಾಳೆ ಯಾರಾದರೂ ನೆನಪಿಸಿಕೊಂಡಾಗ ಬಿಕ್ಕಳಿಸುತ್ತೇವೆಂದು! ಇದು ಎಷ್ಟು ನಿಜ?

0
177

ನಮ್ಮ ತಾಯಂದಿರ ಪ್ರಕಾರ ನಮ್ಮನ್ನ ಯಾರಾದರೂ ನೆನಪಿಸಿಕೊಂಡಾಗ ನಾವು ಬಿಕ್ಕಳಿಸುತ್ತೇವೆ. ಆದರೆ ಅಮೆರಿಕಾದ ಚಾರ್ಲ್ಸ್ ಆಲ್ ಬಾರ್ನ್ ಅನ್ನೋ ಮಹಾನುಭಾವನನ್ನು ಅದ್ಯಾರು ಅಷ್ಟೊಂದು ವರ್ಷಗಳ ಕಾಲ ನೆನಪಿಸಿಕೊಳ್ಳಿತ್ತಿದ್ದರೋ ಏನೋ? ಅವನು ೧೯೨೨ರಿಂದ ನಿಮಿಷಕ್ಕೆ ಸರಿಸುಮಾರು ನಲವತ್ತು ಬಾರಿಯಂತೆ ಅರವತ್ತೊಂಬತ್ತು ವರ್ಷ ದೀರ್ಘ ಕಾಲ ಸತತವಾಗಿ ಬಿಕ್ಕಳಿಸಿದ. ಬಿಕ್ಕುತ್ತಲೇ ಅವನ ಆಯಸನ್ನ ಕಳೆದುಬಿಟ್ಟ.

ನಾವು ಅತಿಯಾಗಿ ನಕ್ಕಾಗಲೋ, ಅಥವಾ ಎದೆಯಲ್ಲಿ ನೀರಿನ ಅಂಶ ಕಡಿಮೆಯಾದಗಲೋ ಎಲ್ಲೋ ಯಾರೋ ನೆನಪಿಸಿಕೊಂಡಾಗ ಬಿಕ್ಕಳಿಸುತ್ತೇವೆ ಎನ್ನುವುದು ಆಧಾರ ರಹಿತ ಕಲ್ಪನೆ. ಆದರೆ ಇದಕ್ಕೆ ನಿಜವಾದ ಕಾರಣ ನಮ್ಮ ಅತಿಯಾದ ತಿನ್ನಾಟ ಮತ್ತು ಕುಡಿತ

ನಾವು ಅತಿಯಾಗಿ ತಿಂದಾಗ ಅಥವಾ ಕುಡಿದಾಗ ಹೊಟ್ಟೆ ಹೇಳದೆ ಕೇಳದೆ ಉಬ್ಬಿ ಡಯಾಫ್ಮ್ ಅಥವಾ ವಪೆಯನ್ನು ( ನಮ್ಮ ಎದೆ ಮತ್ತು ಹೊಟ್ಟೆಯ ನಡುವೆ ಇರುವ ಒಂದು ತೆಳುವಾದ ಮಾಂಸದ ಹಾಳೆಯಂಥದ್ದು) ಮೇಲಕ್ಕೆ ತಳ್ಳುವುದರಿಂದ ಅದು ನಮ್ಮ ಶ್ವಾಸಕೋಶವನ್ನು ಒತ್ತಿ ಅಲ್ಲಿರುವ ಗಾಳಿಯನ್ನು ಥಟ್ಟನೇ ಸದ್ದು ಮಾಡುತ್ತ ಹೊರಕ್ಕೆ ನೂಕುತ್ತದೆ. ಆಗಲೇ ನಮಗೆ ಬಿಕ್ಕಳಿಕೆ ಬರುವುದು.

ಒಮ್ಮೊಮ್ಮೆ ಬಕಾಸುರನ ಹಾಗೆ ತಿಂದ ಅನ್ನ ಕೆಳಗೆ ಇಳಿಯದೆ ಅನ್ನನಾಳದಲ್ಲಿಯೇ ಮುಷ್ಕರ ಹೂಡಿದಾಗಲೂ ಗಾಳಿ ಅದನ್ನು ಮೇಳಕ್ಕೆ ತಳ್ಳಿ ಬಿಕ್ಕಳಿಕೆಗೆ ಕಾರಣವಾಗುವುದುಂಟು.

ಈ ಸೌಮ್ಯವಾದ ಪೆಡಂಭೂತವನ್ನು ಹೊಡೆದೋಡಿಸಲು ನೂರಾರು ಉಪಾಯಗಳನ್ನು ಸೂಚಿಸಬಹುದೋ ಏನೋ. ಎಲ್ಲಕ್ಕಿಂತಲೂ ಅತ್ಯಂತ ಸುಲಭವಾದ ಮತ್ತು ಪರಿಣಾಮಕಾರಿ ಪರಿಹಾರವೆಂದರೆ ಉಸಿರನ್ನು ಹಿಡಿದಿಟ್ಟುಕೊಳ್ಳುವುದು. ಇದನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಜಾರಿ ತರಬಹುದಾದ ಸುಲಭ ಉಪಾಯ.

LEAVE A REPLY

Please enter your comment!
Please enter your name here