Thursday, August 18, 2022

Latest Posts

ಬಿಗ್‌ಬಾಸ್‌ನಲ್ಲಿ ರವಿ ಸರ್ ಜೊತೆ ಕಳೆದ ದಿನಗಳನ್ನು ಯಾವತ್ತೂ ಮರೆಯುವುದಿಲ್ಲ: ದೀಪಿಕಾ ದಾಸ್

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಖ್ಯಾತ ಪತ್ರಕರ್ತ ರವಿ ಬೆಳಗೆರೆ ಬಿಗ್‌ಬಾಸ್ ಸೀಸನ್ 7 ನ ಅತಿಥಿಯೂ ಹೌದು. ಬಿಗ್‌ಬಾಸ್ ಸ್ಪರ್ಧಿ ದೀಪಿಕಾ ದಾಸ್ ರವಿ ಬೆಳಗೆರೆ ಅವರನ್ನು ನೆನೆದು ಕಣ್ಣೀರಿಟ್ಟಾರೆ.
ಅಂತಿಮ ದರ್ಶನದಲ್ಲಿ ಪಾಲ್ಗೊಂಡ ದೀಪಿಕಾ ದಾಸ್ ಅವರು ರವಿ ಬೆಳಗೆರೆ ಅವರ ಜೊತೆ ಕಳೆದ ಒಂದು ವಾರದ ನೆನಪನ್ನು ಮೆಲುಕು ಹಾಕುತ್ತಾ ಭಾವುಕರಾಗಿದ್ದಾರೆ.
ಜನ ರವಿ ಬೆಳಗೆರೆ ಅಂದರೆ ಕಾಂಟ್ರವರ್ಸಿ ಹಾಗೂ ನೆಗೆಟಿವ್ ಮಾತುಗಳನ್ನು ಹೇಳುತ್ತಾರೆ, ಆದರೆ ನಾನು ಕಣ್ಣಾರೆ ನೋಡಿದ್ದೇನೆ ಅವರು ಎಂಥಾ ವ್ಯಕ್ತಿ ಎಂದು. ಹೊರಜಗತ್ತಿನಲ್ಲಿ ಅವರೇನೇ ಇರಬಹುದು ನಮ್ಮ ಜೊತೆ ಮಗುವಾಗಿದ್ದರು ಎಂದಿದ್ದಾರೆ. ವಯಸ್ಸಾಗಿದ್ದರೂ, ಆರೋಗ್ಯ ಕೈಕೊಟ್ಟಿದ್ದರೂ ಎಲ್ಲ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಧೂಮಪಾನ ನಿಲ್ಲಿಸಿ ಎಂದು ನಾನು ದುಂಬಾಲು ಬೀಳುತ್ತಿದ್ದೆ ಅವರು ನನ್ನ ಜೊತೆ ಬಿಡುತ್ತೇನೆ ಎಂದು ತಮಾಷೆ ಮಾಡುತ್ತಿದ್ದರು ಎಂದು ದೀಪಿಕಾ ನೆನೆಸಿದ್ದಾರೆ. ಅನೇಕ ಸ್ವಾರಸ್ಯಕರ, ರೋಚಕ ಕಥೆಗಳನ್ನು ಕೇಳಲು ಸಿಕ್ಕಿತ್ತು. ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!