ಹೊಸದಿಗಂತ ಆನ್ ಲೈನ್ ಡೆಸ್ಕ್:
ರೋಗಿಯೋರ್ವ ಬಿಗ್ ಬಾಸ್ ರಿಯಾಲಿಟಿ ಶೋ ನೋಡುತ್ತಾ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವಿಲಕ್ಷಣ ಘಟನೆಯೊಂದು ಆಂಧ್ರ ಪ್ರದೇಶದಲ್ಲಿ ನಡೆದಿದೆ.
33 ವರ್ಷದ ಪ್ರಸಾದ್ ಎಂಬವರಿಗೆ ಮೆದುಳಿನ ಶಸ್ತ್ರ ಚಿಕಿತ್ಸೆಯ ಅಗತ್ಯವಿತ್ತು. ಇದಕ್ಕಾಗಿ ಆಸ್ಪತ್ರೆಯಲ್ಲಿ ಸಿದ್ಧತೆ ಕೂಡಾ ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಗೂ ಮುನ್ನ ವ್ಐದ್ಯರು ಅರವಳಿಕೆ ನೀಡಲು ಮುಂದಾದಾಗ ರೋಗಿಯು ಅದನ್ನು ನಿರಾಕರಿಸಿದ್ದು, ತಾನು ಬಿಗ್ ಬಾಸ್ ರಿಯಾಲಿಟಿ ಶೋ ನೋಡುತ್ತಾ ಸರ್ಜರಿ ಮಾಡಿಸಿಕೊಳ್ಳುತ್ತೇನೆ ಎಂದಿದ್ದರು. ಮನವೊಲಿಸುವ ಸತತ ಪ್ರಯತ್ನ ನಡೆಸಲಾಯಿತಾದರೂ ವೈದ್ಯ ಇದರಲ್ಲಿ ವಿಫಲರಾಗಿದ್ದಾರೆ. ಕೊನೆಗೆ ರೋಗಿಯ ಇಚ್ಛೆಯಂತೆ ಬಿಗ್ ಬಾಸ್, ಅವತಾರ್ ವೀಕ್ಷಿಸುತ್ತಿದ್ದ ವೇಳೆಯೇ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ಈ ಅಚ್ಚರಿಯ ಘಟನೆ ನಡೆದಿರುವುದು ಗುಂಟೂರಿನ ಬೃಂದಾ ನ್ಯೂರೋ ಸೆಂಟರ್ನಲ್ಲಿ ಎಂದು ಹೇಳಲಾಗಿದೆ.
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದೆ.