ಬಿಗ್ ಬಾಸ್ ಹಿಂದಿ ೧೪ನೇ ಆವೃತ್ತಿ ಬಗ್ಗೆ ಕುತೂಹಲ ಹೆಚ್ಚಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಕಲರ್ಪುಲ್ ಆಗಿ, ಚೆನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಆಯೋಜಕರು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಜಾಸ್ಮಿನ್ ‘ಭಾಸಿನ್ ನಿಶಾಂತ್ ಸಿಂಗ್ ಮಲ್ಕನ್ ಮತ್ತು ಬಾಲಿವುಡ್ ನಟಿ ನೇಹಾ ಶರ್ಮಾ ಸೇರಿದಂತೆ ಬಾಲಿವುಡ್ನ ಕೆಲವು ತಾರೆಯರು ಈ ಸಲ ಬಿಗ್ ಬಾಸ್ ಮನೆಗೆ ಕರೆತರಲು ಸಂಪರ್ಕಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈಗಾಗಲೇ ನಿಗದಿಯಾಗಿರುವಂತೆ ಅಕ್ಟೋಬರ್ ತಿಂಗಳಲ್ಲಿ ಬಿಗ್ ಬಾಸ್ ಆರಂಭವಾಗಲಿದ್ದು, ಎರಡೂ ದಿನಕ್ಕೂ ಮುಂಚಿತವಾಗಿ ಸಲ್ಲು ಶೂಟಿಂಗ್ನಲ್ಲಿ ಭಾಗವಹಿಸಲಿದ್ದಾರೆ.ಮುಂಬೈ ಮಿರ್ರ ವರದಿ ಮಾಡಿರುವ ಪ್ರಕಾರ ’’ಬಿಗ್ ಬಾಸ್ ಸೀಸನ್ ೧೪ ಅಕ್ಟೋರ್ಬ ೪ರಿಂದ ಪ್ರಸಾರವಾಗಲಿದೆ. ಆದರೆ, ಮೊದಲ ದಿನ ಶೂಟಿಂಗ್ ಒಂದು ದಿನ ಮುಂಚಿತವಾಗಿಯೇ ನಡೆಯಲಿದೆ. ಸದ್ಯದ ಮಾಹಿತಿಯಂತೆ ಅಕ್ಟೋರ್ಬ೧ ರಂದು ಸಲ್ಮಾನ್ ಅವರ ಭಾಗದ ಚಿತ್ರೀಕರಣ ನಡೆಯಲಿದೆ.