Monday, August 15, 2022

Latest Posts

ಬಿಜೆಪಿಯಿಂದ ನಿರಂತರ ಸೇವಾ ಚಟುವಟಿಕೆ ಮೂಲಕ ಸಮಾಜಮುಖಿ ಕಾರ್ಯ: ಅರುಣಕುಮಾರ

ಹೊಸದಿಗಂತ ವರದಿ, ಕಲಬುರಗಿ:

ಸೆ.17 ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಿಂದ ಹಿಡಿದುಕೊಂಡು ಅ.07ರವರೆಗೆ ನಿರಂತರವಾಗಿ ಭಾರತೀಯ ಜನತಾ ಪಕ್ಷವು ಅನೇಕ ಸೇವಾ ಚಟುವಟಿಕೆಗಳ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡಿದೆ ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಜೀ ತಿಳಿಸಿದರು.

ನಗರದ ಚೆಂಬರ್ ಆಫ್ ಕಾಮರ್ಸ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಕಲಬುರಗಿ ಮಹಾನಗರ ಜಿಲ್ಲಾ ಕಾರ್ಯಕಾರ್ಯಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ. ಕೋವಿಡ್ 2ನೇ ಅಲೆಯಲ್ಲಿ ಸೇವಾ ಹೀ ಸಂಘಟನೆಯ ಅಡಿಯಲ್ಲಿ ಪಕ್ಷದ ವತಿಯಿಂದ ಅನೇಕ ಕಾರ್ಯಗಳು ನಡೆದಿವೆ. ಆಹಾರ್ ಕಿಟ್, ಮಾಸ್ಕ ವಿತರಣೆ, ಸ್ವಚ್ಚತೆ ಸೇರಿದಂತೆ ನಾನಾ ರೀತಿಯ ಸಮಾಜ ಮುಖಿ ಕಾರ್ಯಗಳು ಪಕ್ಷದ ವಿವಿಧ ಪದಾಧಿಕಾರಿಗಳು, ಬೂತ ಮಟ್ಟದ ಕಾರ್ಯಕರ್ತರು ತಮ್ಮ ತಮ್ಮ ಬೂತನಲ್ಲಿ ಆಯೋಜಿಸಿ, ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದರು.

ಕೆಕೆಆರ್‍ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಭಾರತ ದೇಶ 100 ಕೋಟಿ ಲಸಿಕೆ ನೀಡುವ ಮೂಲಕ ಇಡೀ ವಿಶ್ವಕ್ಕೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡಿದೆ. ಇದರ ಶ್ರೇಯಸ್ಸು ನಮ್ಮ ಕೋವಿಟ್ ವಾರಿಯರ್ಸಗಳಾದ ವೈದ್ಯರು, ನರ್ಸಗಳು, ಆಶಾ ಕಾರ್ಯಕರ್ತೆಯರು ಹಾಗೂ ವಿಶೇಷವಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ವಿರೋಧ ಪಕ್ಷ ಕಾಂಗ್ರೆಸ್ ನವರು ಕೇಂದ್ರ ಸರ್ಕಾರ ಕಿಸಾನ ವಿರೋಧಿ ಸರ್ಕಾರವೆಂದು ಬಿಂಬಿಸಿದರು, ಆದರೆ ರೈತ ಬೆಳೆದ ಬೆಳೆಯನ್ನು ಸರಿಯಾದ ದರ ಸಿಗುವ ನಿಟ್ಟಿನಲ್ಲಿ ಕೃಷಿ ಕಾನೂನುಗಳನ್ನು ತಂದು ರೈತರಿಗೆ ಲಾಭವಾಗುವ ನಿಟ್ಟಿನಲ್ಲಿ ಕೆಲಸವಾಗಿದೆ ಎಂದರು.

ಕೇಂದ್ರ ಸರ್ಕಾರದಿಂದ ಅಮೃತ ಯೋಜನಯಡಿ 150 ಕೋಟಿ ಅನುದಾನವನ್ನು ತಂದು ಕಲಬುರಗಿಯಲ್ಲಿ ಈ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು. ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಶಶೀಲ ನಮೋಶಿ, ರಾಜು ಮಗ್ಗಿಮಟ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾದೇವ ಬೆಳಮಗಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss