ಧಾರವಾಡ: ರಾಜ್ಯದಲ್ಲಿ ಎರಡು ವಿಧಾನಸಭೆಗೆ ಉಪಚುನಾವಣೆ ಹಾಗೂ ಎರಡು ನಾಲ್ಕು ವಿಧಾನ ಪರಿಷತ್ ಗೆ ಚುನಾವಣೆ ಪಕ್ಷದಿಂದ ಸ್ಪರ್ಧಿಸಿದ ಅಭ್ಯರ್ಥಿಗಳು ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಒಲವು ಬಿಜೆಪಿ ಪರವಾಗಿದೆ. ಮೋದಿ ಹಾಗೂ ಬಿ.ಎಸ್.ವೈ ಆಡಳಿತದ ಸಾಧನೆ ಅಭ್ಯರ್ಥಿಗಳ ಗೆಲವಿಗೆ ವರದಾನವಾಗಲಿವೆ. ಬಿಜೆಪಿ ಅಲೆ ಇಲ್ಲದ ಕ್ಷೇತ್ರದ ಮತದಾರರನ್ನು ಪಕ್ಷದ ಕಡೆಗೆ ವಾಲುವಂತೆ ಮಾಡಿದೆ ಎಂದರು.
ಶಿರಾ ಹಾಗೂ ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಕಡಿಮೆ ಇದೆ. ಕಳೆದ ಚುನಾವಣೆಯಲ್ಲಿ ಜೆಪಿಗೆ ೧೪ ಸಾವಿರ ಮಗಳು ಬಂದಿವೆ. ಈ ಸಾರಿ ಮುಖ್ಯಮಂತ್ರಿ ಹಾಗೂ ನಾನು ವಿಶೇಷ ಪ್ರವಾಸದ ಮೂಲಕ ಮತದರಾರನ್ನು ಸೆಳೆಯುವ ಪ್ರಯತ್ನ ಮಾಡಿದೆ ಎಂದು ತಿಳಿಸಿದರು.
ಅಲ್ಲಿನ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಸ್ಥಳೀಯ ಸಂಸ್ಥೆಗಳ ಸದಸ್ಯ ಭ್ರಮ ನಿರಸಗೊಂಡು ಬಿಜೆಪಿ ಸೇರ್ಪಡೆಗೊಂಡಿದ್ದು, ಅಲ್ಲಿ ಬಿಜೆಪಿ ಪರ ಅಲೆ ಸೃಷ್ಠಿಯಾಗಿದೆ ಎಂದು ಹೇಳಿದರು.