Friday, July 1, 2022

Latest Posts

ಬಿಜೆಪಿ ಅಭ್ಯರ್ಥಿಯಾಗಿ ಕೇರಳ ಚುನಾವಣಾ ಅಖಾಡಕ್ಕೆ ಧುಮುಕಿದ ‘ಕೊರೋನಾ’!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಕೇರಳ ಚುನಾವಣಾ ಅಖಾಡದಿಂದ ಮತ್ತೊಂದು ಇಂಟ್ರಸ್ಟಿಂಗ್ ಸುದ್ದು ಹೊರಬಿದ್ದಿದೆ.
ಕೊಲ್ಲಂ ಮಹಾನಗರ ಪಾಲಿಕೆ ಚುನಾವಣೆಯ ಮದಿಲಿಲ್ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿರುವುದು ‘ಕೊರೋನಾ’!

ಅಚ್ಚರಿ ಪಡಬೇಡಿ, ಇದು ವೈರಸ್ ಅಲ್ಲ, ಅಭ್ಯರ್ಥಿಯ ಸಹಜ ಹೆಸರು. ೨೪ ವರ್ಷದ ಈ ಯುವತಿಯ ಹೆಸರು ಕೊರೋನಾ ಥಾಮಸ್.

ನನ್ನ ಹೆಸರು ಕೊರೋನಾ. ನಾನು ಬಿಜೆಪಿ ಅಭ್ಯರ್ಥಿ. ನಿಮ್ಮ ಮತ ನನಗೆ ನೀಡಿ ಗೆಲ್ಲಿಸಿ ಕಳುಹಿಸಿ. ನಿಮ್ಮ ಜೊತೆಗಿದ್ದು ಕೆಲಸ ಮಾಡುವೆ ಎಂದು ಈಕೆ ಮದಿಲಿಲ್ ವಾರ್ಡಿನಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ಮತಯಾಚಿಸುತ್ತಿದ್ದಾರೆ.

ಥಾಮಸ್ ಫ್ರಾನ್ಸಿಸ್ ಎಂಬುವವರ ಅವಳಿ ಮಕ್ಕಳ ಪೈಕಿ ಒಬ್ಬಾಕೆ ಈ ಕೊರೊನಾ ಥೋಮಸ್. ಇನ್ನೊಬ್ಬ ಸಹೋದರ- ಹೆಸರು ಕೋರಲ್. ಇವರಿಗೆ ನಾಮಕರಣ ಮಾಡಲು ಹೆತ್ತವರು ನಿಘಂಟು ಪೂರ್ತಿ ಹುಡುಕಿ ಈ ಹೆಸರು ಆಯ್ಕೆ ಮಾಡಿದ್ದರು. ಮುಂದೊಂದು ದಿನ ಈ ಹೆಸರಿನ ವೈರಸ್ ಜಗತ್ತನ್ನೇ ತಲ್ಲಣಗೊಳಿಸಲಿದೆ ಎಂಬ ಕಲ್ಪನೆಯೂ ಆಗ ಇವರಿಗಿರಲಿಲ್ಲ.

ಅಂದಹಾಗೆ ಮತಯಾಚನೆಯಲ್ಲೂ ವಿಶೇಷತೆ ಮೆರೆದಿರುವ ಈ ಯುವತಿ,  ಪ್ರತಿ ಮನೆಯವರಿಗೂ ಸ್ಯಾನಿಟೈಸರ್, ಮಾಸ್ಕ್ ಮತ್ತು ಗ್ಲೌಸ್ ನೀಡುತ್ತಾ  ನಗುಮೊಗದಿಂದಲೇ ಮತಯಾಚಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ತಿಂಗಳು ಕೊಲ್ಲಂ ಕಾರ್ಪೊರೇಷನ್ ಚುನಾವಣೆ ಇದ್ದು, ಪೂರ್ವ ತಯಾರಿ ಜೋರಾಗಿ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss